Published By: Kala Karanataka
Last Updated Date: 23-Aug-2022
"ವಿಶಾಂಕೇ ಅರ್ಥಾತ್ ವಿಧ್ವಂಸಕ ಶಾಂತಿ ಕೇಂದ್ರ " ನಾಟಕದ ಎರಡು ಪ್ರದರ್ಶನಗಳು ಬೆಂಗಳೂರಿನ ರಂಗಶಂಕರದಲ್ಲಿ "
ರಂಗಭೂಮಿ ರಿ ಉಡುಪಿ ಯ ಕಲಾವಿದರು ಅಭಿನಯಿಸುವ "ವಿಶಾಂಕೇ ಅರ್ಥಾತ್ ವಿಧ್ವಂಸಕ ಶಾಂತಿ ಕೇಂದ್ರ " ನಾಟಕದ ಎರಡು ಪ್ರದರ್ಶನಗಳು ಬೆಂಗಳೂರಿನ ರಂಗಶಂಕರದಲ್ಲಿ ಇದೇ ಆಗಸ್ಟ್ 27 ಶನಿವಾರ ಅಪರಾಹ್ನ 3.30 ಹಾಗೂ ಸಂಜೆ 7.30 ಕುಕ್ಕೆ ನಡೆಯಲಿದೆ.
ರಂಗಭೂಮಿ ಸಂಸ್ಥೆಯ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ನಡೆಸಿದ್ದ "ಡಾ. ಹೆಚ್. ಶಾಂತಾರಾಮ್ ವಿಶ್ವ ಕನ್ನಡ ನಾಟಕ ರಚನಾ ಸ್ಪರ್ಧೆ" ಯಲ್ಲಿ ಪ್ರಥಮ ಬಹುಮಾನ ಪಡೆದ ಶ್ರೀ ಮೌನೇಶ್ ಬಡಿಗೇರ್ ಇವರ ಕೃತಿ ಇದು.
ಇದನ್ನು ಕನ್ನಡ ನಾಟಕ ರಂಗದ ಮೇರು ನಿರ್ದೇಶಕರುಗಳಲ್ಲಿ ಓರ್ವರಾಗಿರುವ ಹಾಗೂ ಝೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ ಖ್ಯಾತಿಯ ನಿರ್ದೇಶಕ ಶ್ರೀ ಮಂಜುನಾಥ ಎಲ್ ಬಡಿಗೇರ ಇವರ ನಿರ್ದೇಶನದಲ್ಲಿ ರಂಗಕ್ಕೆ ತಂದಿದ್ದೇವೆ.
ನೀವು ಸಕುಟುಂಬ ಸಮೇತರಾಗಿ ಬನ್ನಿ. ಹಾಗೆಯೇ ಬೆಂಗಳೂರಿನಲ್ಲಿ ಇರುವ ನಿಮ್ಮ ಸ್ನೇಹಿತರಿಗೆ ದಯವಿಟ್ಟು ಈ ನಾಟಕ ನೋಡುವಂತೆ ಹೇಳಿ, ಪ್ರೋತ್ಸಾಹಿಸಿ.
ಟಿಕೇಟ್ ಗಳನ್ನು Bookmyshow ಮೂಲಕ ಇಲ್ಲಿ ಪಡೆಯಿರಿ
https://in.bookmyshow.com/plays/vishanke/ET00337380
ನಿಮ್ಮೆಲ್ಲರ ಪ್ರೀತಿಯ ಸಹಕಾರದ ನಿರೀಕ್ಷೆಯಲ್ಲಿ
- ರಂಗಭೂಮಿ (ರಿ.) ಉಡುಪಿ