logo

ಕಲಾ
ಕರ್ನಾಟಕ

www.kalakarnataka.com

ಸುವಿಚಾರ
ಬುದ್ಧನಾದ ; ಬದ್ಧನಾದ..????ಸಿದ್ಧನಾದ ಸಿದ್ಧಾರ್ಥ ತನ್ನ ಸಿದ್ಧಾಂತ ಸಾಧನೆಗೆ , ಸತ್ಯದ ಪಥದತ್ತ ಸಾಗಲು ಶಪಥಗೈದ, ಆಶೆಗಳ ಮೆಟ್ಟಿ ಗಟ್ಟಿ ಮನದಿ ತೆರೆದ ಹೊಸ ಮನ್ವಂತರದ ಕಾರುಣ್ಯದ ಶಾಂತಿ ಬಾಗಿಲು. ಬದುಕಿನ ನಿಜ ಸಾರ ತಿಳಿದೆದ್ದ , ಬುದ್ಧನಾದ, ಬದ್ಧನಾದ.. ...ಶಿ.ಗು.ಕುಸುಗಲ್ಲ
- - ಶಿ.ಗು.ಕುಸುಗಲ್ಲ

ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಸಪ್ಟೆಂಬರ್ 10 ರಿಂದ 16-2024 ರವರೆಗೆ 'ಕಲರಾ೯ಗ್ ' ಏಕವ್ಯಕ್ತಿ ಕಲಾಪ್ರದರ್ಶನ

Advanced Search

ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಸಪ್ಟೆಂಬರ್ 10 ರಿಂದ 16-2024 ರವರೆಗೆ 'ಕಲರಾ೯ಗ್ ' ಏಕವ್ಯಕ್ತಿ ಕಲಾಪ್ರದರ್ಶನ

"ಕಾವ್ಯಾತ್ಮಕ ಅಭಿವ್ಯಕ್ತಿ"--   'ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಬಣ್ಣಗಳನ್ನು ಬಳಸಿ ವರ್ಣಚಿತ್ರ ರಚಿಸುವ ಕಲಾವಿದ ಉತ್ತಮನು'ಎಂಬುದು ಪಾಶ್ಚಾತ್ಯ ರಮ್ಯ ಕಲಾವಿದ ಟರ್ನರ್ ಎಂಬುವನ ನುಡಿ.
    ಮುಂಬೈನ ಪ್ರತಿಷ್ಠಿತ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಇದೇ ಸಪ್ಟೆಂಬರ್ 10 ರಿಂದಸೆಪ್ಟೆಂಬರ್ 16-2024 ರವರೆಗೆ 'ಕಲರಾ೯ಗ್ ' ಶೀರ್ಷಿಕೆ ಯಡಿ ತಮ್ಮ ವರ್ಣಚಿತ್ರಗಳನ್ನು ಪ್ರದರ್ಶಿಸಲಿರುವ ಮಂಗಳೂರಿನ ಪವನ್ ಕುಮಾರ್ ಅತ್ತಾವರ್ ರವರ ಏಕವ್ಯಕ್ತಿ ಕಲಾಪ್ರದರ್ಶನ ದಲ್ಲಿ ಪ್ರದರ್ಶನಗೊಳ್ಳಲಿರುವ ಕಲಾಕೃತಿಗಳು ಟರ್ನರ್ ನ ಈ ಮೇಲಿನ ನುಡಿಗಳನ್ನು ದೃಢೀಕರಿಸುವಂತಿವೆ.

   ಆಯೋಜಿಸಲಿರುವ ಕಲಾಪ್ರದರ್ಶನದಲ್ಲಿನ ಬಹುತೇಕ ಕಲಾಕೃತಿಗಳು ಕೆಂಪು-ಕಪ್ಪು, ಕೆಂಪು; ನೀಲಿ ಬಣ್ಣಗಳನ್ನೇ ಪ್ರಧಾನವಾಗಿ ಹೊಂದಿದ್ದು ಸಂಗೀತ ಕಛೇರಿಗಳಲ್ಲಿನ ವಾದ್ಯ ಪರಿಕರಗಳನ್ನು ಅಭಿವ್ಯಕ್ತಿಯ ವಸ್ತು ವಿಷಯಗಳಾಗಿ ಹೊಂದಿವೆ.ಕೆಲವೇ ಬಣ್ಣಗಳಲ್ಲಿ  ಕಲಾವಿದರು ಸಂಗೀತ ಉಪಕರಣಗಳಲ್ಲಿ ಎತ್ತು ,ವೀಣೆ ,ಮಾನವ ಹಸ್ತ ,ಹೆಣ್ಣಿನ ರೂಪ ಮೊದಲಾದ ಜೈವಿಕ, ಅಜೈವಿಕ ಆಕೃತಿಗಳನ್ನು ಆವಾಹಿಸಿ ಕ್ಯಾನವಾಸ್ ಎಂಬ ಅವಕಾಶದಲ್ಲಿ ಸರ್ರಿಯಲ್ ನೆಲೆಯಲ್ಲಿ ಕಲಾತ್ಮಕ ಸೊಬಗನ್ನು ಸಮ್ಮಿಳನಗೊಳಿಸಿ ರಚಿಸಿರುವುದು ವಿಶೇಷ.ಚಿತ್ರಗಳಲ್ಲಿ ಪ್ರಧಾನ ವಿಷಯವನ್ನು ಸೆಂಟ್ರಲ್ ಫೋಕಸ್ ಮಾಡಿ ಉಳಿದ ಅವಕಾಶಗಳನ್ನು ಖಾಲಿ ಇರಿಸಿ ವೀಕ್ಷಕರ ಕಣ್ ನೋಟ ಸರಕ್ಕನೆ ಅಲ್ಲಿನ ಮುಖ್ಯ ನಿರೂಪಣೆಯತ್ತ ಹರಿಯುವಂತೆ ಮಾಡಿರುವುದು ಇವರ ವೈಯಕ್ತಿಕ ಶೈಲಿಯ ಲಕ್ಷಣವಾಗಿಯೂ ಮತ್ತು ಇವರದೇ ಆದ ಕಲಾತಂತ್ರಗಾರಿಕೆಯಾಗಿಯೂ ಪರಿಗಣನೀಯವಾಗತಕ್ಕ ಅಂಶಗಳು.  ಆಕೃತಿಗಳ ಅಂಚಿನಲ್ಲಿ ಗಾಢ,ಮಧ್ಯಮ, ಮಂದ ವರ್ಣ  ಛಾಯಾಕರಣ ಸೃಷ್ಟಿಸಿ ರುವುದು ಆಕೃತಿಗಳು ಕ್ಯಾನವಾಸ್ ಎಂಬ ಅವಕಾಶ ದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತವೆ.ನೈಜಶೈಲಿನಿಷ್ಠ ಆಕೃತಿಗಳು ಅಲ್ಲಲ್ಲಿ ಕನಸಿನಲ್ಲಿ ಮಾತ್ರ ಗೋಚರವಾಗಬಹುದಾದ , ವಾಸ್ತವಾತೀತವಾದ 'ವಿಕೃತಿ'ಯಿಂದೊಡಗೂಡಿ ಪ್ರಸ್ತುತಿಗೊಂಡಿರುವುದು ವೀಕ್ಷಕರಿಗೆ ಅಚ್ಚರಿಯ ನೋಟ ಒದಗಿಸುವ ಸಾಧ್ಯತೆಗಳಿವೆ.

     ಸಂಗೀತ ಕಛೇರಿಗಳಿಂದ ಪ್ರಭಾವಿತರಾಗಿ ರಚಿಸಿರುವ ಕಲಾಕೃತಿಗಳು ಕಲಾವಿದರ ಮನೋವಲಯದಲ್ಲಿ ಉಂಟಾದ ಭಾವಸಂದೋಹದ ಪ್ರತಿಧ್ವನಿಗಳೆಂಬುದನ್ನು ಸಂಗೀತಜ್ಞ ನೋಡುಗರು ಲಕ್ಷ್ಯದಲ್ಲಿರಿಸಿಕೊಂಡು ನೋಡುವುದು ವಿಹಿತ(ಇಲ್ಲವಾದರೆ ಸಂಗೀತಜ್ಞ ನೋಡುಗರಿಗೂ ಕಲಾಕೃತಿ ರಚಿಸಿದ ಕಲಾವಿದರಿಗೂ ಭಿನ್ನಾಭಿಪ್ರಾಯ ಮೂಡಬಹುದಾದ ಸಾಧ್ಯತೆಯೂ ಇಲ್ಲದಿಲ್ಲ ಎಂಬುದನ್ನು ಅನುಲಕ್ಷ್ಯಿಸಿ ಈ ಸಲಹೆ).ಹಮ್ಮಿಕೊಂಡಿರುವ ಪ್ರದರ್ಶನದಲ್ಲಿ ಇವರ 21ಕಲಾಕೃತಿಗಳು ಇರಲಿದ್ದು, ಆಕೃಲಿಕ್ ಆನ್ ಕ್ಯಾನವಾಸ್ ಮಾಧ್ಯಮದಲ್ಲಿ ರಚಿತವಾದವುಗಳು.ಬಹುತೇಕ ಕೃತಿಗಳು 30ಇಂಚು×24ಇಂಚು ಅಳತೆಯವು, ಕೆಲವು 36×24ಇಂಚು ಅಳತೆಯವು.

     ದಾವಣಗೆರೆಯ ಲಲಿತಕಲಾ ಮಹಾವಿದ್ಯಾಲಯದಲ್ಲಿ(ಈಗಿನ ದೃಶ್ಯ ಕಲಾ ಮಹಾವಿದ್ಯಾಲಯ ದಾವಣಗೆರೆ) ಚಿತ್ರ ಕಲಾ ಪದವಿ ಅಭ್ಯಸಿಸಿ ಪುಣೆಯಲ್ಲಿ ಅಡ್ವಾನ್ಸ್ಡ್ ಕಂಪ್ಯೂಟರ್ ಡಿಪ್ಲೊಮಾ ಕೋರ್ಸ್ ಮುಗಿಸಿರುವ ಪವನ್ ಕುಮಾರ್ ಅತ್ತಾವರ್ ರವರ ತಂದೆ ದಿ.ಓಂಪ್ರಕಾಶ್ ರವರೂ ಸಹ ಒಳ್ಳೆಯ ಚಿತ್ರಕಾರರೇ ಆಗಿದ್ದರಿಂದ ಚಿತ್ರ ಕಲೆ ಇವರಿಗೆ ತಂದೆಯಿಂದ ಬಳುವಳಿಯಾಗಿ ಬಂದುದೆನ್ನಲಡ್ಡಿಯಿಲ್ಲ.

    ಸದ್ಯ ಮಣಿಪಾಲದ ಕಂಪನಿಯೊಂದರಲ್ಲಿ ಕಲಾವಿದರಾಗಿ /ವಿನ್ಯಾಸಕಾರರಾಗಿ ವೃತ್ತಿನಿರತರಾಗಿರುವ ಪವನ್ ಕುಮಾರ್ ಅತ್ತಾವರ್ ರಿಗೆ 45ರ ಹರೆಯ.ದೇಶದ ಎಲ್ಲ ಕ್ರಿಯಾಶೀಲ ಕಲಾವಿದರುಗಳ ಕನಸು 'ಜೀವನದಲ್ಲಿ ಒಮ್ಮೆಯಾದರೂ ಮುಂಬೈನಲ್ಲಿರುವ ಪ್ರಸಿದ್ಧ 'ಜಹಾಂಗೀರ್ ಆರ್ಟ್ ಗ್ಯಾಲರಿ'ಯಲ್ಲಿ  ಕಲಾಕೃತಿಗಳನ್ನು ಪ್ರದರ್ಶಿಸಬೇಕು'ಎಂಬುದಾಗಿರುತ್ತದೆ.ಏಕೆಂದರೆ ಆ ಗ್ಯಾಲರಿಯಲ್ಲಿ ಹೋಗಿ ಕೇಳಿಕೊಂಡವರಿಗೆಲ್ಲ ಒಪ್ಪಿಗೆ ಕೊಡುವುದಿಲ್ಲ. ಅಲ್ಲಿ ಕಲಾಪ್ರದರ್ಶನ ಮಾಡಬಯಸುವ ಕಲಾವಿದ/ದೆ ತಮ್ಮ ಪರಿಚಯ,ಸಾಧನೆ, ಕಲಾಕೃತಿಗಳ ಒಳ್ಳೆಯ ಪೋಟೋ ಲಗತ್ತಿಸಿ ಅರ್ಜಿ ಹಾಕಿಕೊಳ್ಳಬೇಕು. ಅದು ಅಲ್ಲಿನ ಆಯ್ಕೆ ಸಮಿತಿಗೆ ಒಪ್ಪಿತವಾದರೆ ಅವರು ಆ ಕುರಿತು ಅಧಿಕೃತವಾಗಿ ತಿಳಿಸುತ್ತಾರೆ. ಅಷ್ಟಾದರೂ ಆರೆಂಟು ವರ್ಷಗಳ ಕಾಲ ಆ ಕಲಾವಿದ/ದೆ ಅಲ್ಲಿ ಪ್ರದರ್ಶನಕ್ಕೆ  ಕಾಯಬೇಕಾಗುತ್ತದೆ. ಪವನ್ ಕುಮಾರ್ ರವರೂ ಕೂಡಾ ಅರ್ಜಿ ಹಾಕಿ, ಒಪ್ಪಿಗೆ ಪಡೆದಿದ್ದು ಸುಮಾರು ಎಂಟು ವರ್ಷಗಳ ಹಿಂದೆ.ಆದರೆ ಇದೀಗ ಅವರ ಸರದಿ ಬಂದಿದೆ ಎಂಬುದು ಕರಾವಳಿ ದೃಶ್ಯ ಕಲಾ ವಲಯಕ್ಕೆ, ಅಷ್ಟೇ ಅಲ್ಲ ಕನ್ನಡ ನಾಡಿನ ದೃಶ್ಯ ಕಲಾ ರಂಗಕ್ಕೆ ಹೆಮ್ಮೆಯ ಸಂಗತಿ.
      ರಮೇಶ ರಾವ್, ಭಾಸ್ಕರರಾವ್ ರಂತಹ ಹಿರಿಯ ದೃಶ್ಯ ಕಲಾವಿದರಿರುವ 'ಆರ್ಟಿಸ್ಟ್ಸ್ ಪೋರಂ ಉಡುಪಿ' ಎಂಬ ಕಲಾ ಬಳಗದ ಸಕ್ರೀಯ ಸದಸ್ಯರಾಗಿ ಆ ಬಳಗದ ಅನೇಕ ಕಲಾಪ್ರದರ್ಶನಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಉಡುಪಿ-ಮಂಗಳೂರು ಭಾಗದ ದೃಶ್ಯ ಕಲಾ ಕ್ಷೇತ್ರದಲ್ಲಿ ಭರವಸೆಯ ದೃಶ್ಯ ಕಲಾವಿದರಾಗಿ ಗಮನಸೆಳೆದಿರುವ ಪವನ್ ಕುಮಾರ್ ಅತ್ತಾವರ್ ಇದೇ ಹಾದಿಯಲ್ಲಿ ಉತ್ಸಾಹದಿಂದ ಸಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿ ಎಂಬುದಾಗಿ ಹಾರೈಕೆ.

 --   ಲೇಖನ--ದತ್ತಾತ್ರೇಯ ಎನ್. ಭಟ್ಟ,  ಕಲಾವಿಮರ್ಶಕ ಮೊ-8867058905, ಮೇಲ್-dnbhat92@gmail.com

Apr 05, 2021 at 9:48 am

" ಮೊನಾಕೊ ಮಾಸ್ಟರ್ಸ್ ಶೋ: ಲಾ ಕೋಟ್ ಡಿ'ಅಜುರ್, ಟೆರೆ ಡಿ'ಇನ್ಸ್ಪಿರೇಷನ್ "The Monaco Masters Show: La Côte d’Azur, terre d’inspiration"
ಒಪೆರಾ ಗ್ಯಾಲರಿಯು ಫರ್ನಾಂಡ್ ಲೆಗರ್, ಪ್ಯಾಬ್ಲೊ ಪಿಕಾಸೊ, ಮಾರ್ಕ್ ಚಾಗಲ್, ಅಲೆಕ್ಸಾಂಡರ್ ಕಾಲ್ಡರ್, ಜೋನ್ ಮಿರೊ, ಜೀನ್ ಡುಬಫೆಟ್, ಹ್ಯಾನ್ಸ್ ಹಾರ್ಟಂಗ್, ಕರೆಲ್ ಆಪ್ಲೆಲ್ ಒಳಗೊಂಡ ಗುಂಪು ಪ್ರದರ್ಶನವನ್ನು 'ದಿ ಮೊನಾಕೊ ಮಾಸ್ಟರ್ಸ್ ಶೋ: ಲಾ ಕೋಟ್ ಡಿ'ಅಜುರ್, ಟೆರ್ರೆ ಡಿ'ಇನ್ಸ್ಪಿರೇಷನ್' ಪ್ರಸ್ತುತಪಡಿಸಲು ಸಂತೋಷವಾಗಿದೆ. , ಜೀನ್-ಪಾಲ್ ರಿಯೊಪೆಲ್ಲೆ, ನಿಕಿ ಡಿ ಸೇಂಟ್ ಫಾಲ್ಲೆ, ಫರ್ನಾಂಡೊ ಬೊಟೆರೊ ಮತ್ತು ಜಾರ್ಜ್ ಕಾಂಡೋ. ಈ ಪ್ರದರ್ಶನವು ಫ್ರೆಂಚ್ ರಿವೇರಿಯಾದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಸಮಯವನ್ನು ಕಳೆದ 20 ನೇ ಮತ್ತು 21 ನೇ ಶತಮಾನದ ಕಲಾವಿದರ ವೈವಿಧ್ಯಮಯ ಶ್ರೇಣಿಯನ್ನು ಪ್ರದರ್ಶಿಸುತ್ತದೆ.


ಪ್ರದರ್ಶನದಲ್ಲಿರುವ ಕಲಾಕೃತಿಗಳು, ಅವುಗಳ ಶ್ರೇಣಿಯ ಕಲಾತ್ಮಕ ಶೈಲಿಗಳು, ಮಾಧ್ಯಮಗಳು ಮತ್ತು ವಿಷಯಗಳು, ಎಲ್ಲದರಲ್ಲೂ ಭಾವನೆ ಮತ್ತು ಕಲ್ಪನೆಯನ್ನು ಪ್ರಚೋದಿಸುವ ಪ್ರದೇಶದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ, ಬಹುಸಂಖ್ಯೆಯ ರೂಪಗಳಲ್ಲಿ ಸೃಜನಶೀಲತೆಯನ್ನು ಉತ್ತೇಜಿಸುತ್ತದೆ. ಇತಿಹಾಸ, ಸಂಸ್ಕೃತಿ, ಹವಾಮಾನ ಮತ್ತು ಬೆಳಕಿನ ವಿಶಿಷ್ಟ ಸ್ಪಷ್ಟತೆಯ ಉದ್ದಕ್ಕೂ, ಕೋಟ್ ಡಿ'ಅಜುರ್ ಕಲಾ ದೃಶ್ಯದಲ್ಲಿ ದೊಡ್ಡ ಕಲಾವಿದರ ಮೇಲೆ ಸೃಜನಾತ್ಮಕವಾಗಿ ಪ್ರಭಾವ ಬೀರಿದೆ. ಅನೇಕರಿಗೆ, ಈ ಪ್ರದೇಶವು ಮಹಾನಗರ ಜೀವನದ ಬಲೆಗಳಿಂದ ಪಾರಾಗುತ್ತದೆ. ಮೆಡಿಟರೇನಿಯನ್ ಸಮುದ್ರವು ಆಶ್ರಯ ಮತ್ತು ನವ ಯೌವನ ಪಡೆಯುವ ಕಲಾವಿದರನ್ನು ಕೈಬೀಸಿ ಕರೆಯುತ್ತಲೇ ಇದೆ. ಪ್ರತಿಯೊಬ್ಬ ಕಲಾವಿದನ ಆತ್ಮಚರಿತ್ರೆಯು ಸಾಮಾನ್ಯ ಉಪಾಖ್ಯಾನವನ್ನು ಒಳಗೊಂಡಿದೆ - ಫ್ರೆಂಚ್ ರಿವೇರಿಯಾದ ಭೂದೃಶ್ಯದ ವಿರುದ್ಧ ಪ್ರತಿಬಿಂಬದ ಕ್ಷಣ ಅಥವಾ ಅವಧಿ. ಉದಾಹರಣೆಗೆ, 1946 ರಲ್ಲಿ, ಪ್ಯಾಬ್ಲೋ ಪಿಕಾಸೊ ಆಂಟಿಬ್ಸ್ಗಾಗಿ ಪ್ಯಾರಿಸ್ ಅನ್ನು ತೊರೆದರು, ಅಲ್ಲಿ ಅವರು ಗ್ರಿಮಾಲ್ಡಿ ಚಟೌದಲ್ಲಿ ದಣಿವರಿಯಿಲ್ಲದೆ ಮೂರು ತಿಂಗಳುಗಳನ್ನು ಕಳೆದರು. ಮೂರು ವರ್ಷಗಳ ನಂತರ, ಮಾರ್ಕ್ ಚಾಗಲ್ ಅವರು ವೆನ್ಸ್ ಸಮೀಪದ ಮನೆಯನ್ನು ಖರೀದಿಸಿದರು, ಅಲ್ಲಿ ಅವರು ಹೆನ್ರಿ ಮ್ಯಾಟಿಸ್ಸೆ, ಫರ್ನಾಂಡ್ ಲೆಗರ್, ಅಲೆಕ್ಸಾಂಡರ್ ಕಾಲ್ಡರ್ ಮತ್ತು ಜೋನ್ ಮಿರೊ ಸೇರಿದಂತೆ ಅನೇಕ ಇತರ  ಕಲಾವಿದರೊಂದಿಗೆ ಹಾದಿಯನ್ನು ದಾಟಿದರು, ಅವರೆಲ್ಲರೂ ಫಂಡೇಶನ್ ಮೇಘಟ್ನಲ್ಲಿ ಆರಂಭಿಕ ಪ್ರದರ್ಶಕರಾಗಿ ಹೋಗುತ್ತಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಕಲಾಲೋಕದಲ್ಲಿ ಕ್ರಾಂತಿ ಮಾಡಿದ ಮಹಾನ್ ಗುರುಗಳ ಮೇಲೆ ಈ ಪ್ರದರ್ಶನ ಬೆಳಕು ಚೆಲ್ಲುತ್ತದೆ. ಆದಾಗ್ಯೂ, ಈ ವರ್ಷದ ಆಯ್ಕೆಮಾಡಿದ ಥೀಮ್ ಏಕಕಾಲದಲ್ಲಿ ಕೋಟ್ ಡಿ'ಅಜುರ್ನ ವಿಶೇಷ ಸ್ಥಳವನ್ನು ಮತ್ತು ಕಲಾವಿದರ ಮೇಲೆ ಅದು ಬೀರಿದ ಆಳವಾದ ಪ್ರಭಾವಗಳನ್ನು ಆಚರಿಸುತ್ತದೆ.



03 July - 31 August 2024
Opera Gallery is pleased to present ‘The Monaco Masters Show: La Côte d’Azur, terre d’inspiration’ a group exhibition featuring Fernand Léger, Pablo Picasso, Marc Chagall, Alexander Calder, Joan Miró, Jean Dubuffet, Hans Hartung, Karel Appel, Jean-Paul Riopelle, Niki de Saint Phalle, Fernando Botero and George Condo. This exhibition showcases a diverse range of 20th and 21st century artists who have spent time living and working on the French Riviera. The artworks on display, in their range of artistic styles, media and subjects, are testament to the region’s ability to stir emotion and imagination in all, stimulating creativity in a multitude of forms.
 Throughout history, culture, climate and unique clarity of light, the Côte d’Azur has creatively influenced the biggest artists on the art scene. For many, this region has been an escape from the trappings of metropolitan life. The Mediterranean Sea continues to beckon artists who seek refuge and rejuvenation. Each artist’s autobiography contains a common anecdote – a moment or period of reflection set against the landscape of the French Riviera. For example, in 1946, Pablo Picasso left occupied Paris for Antibes, where he spent three months working tirelessly in the Grimaldi Chateau. Three years later, Marc Chagall bought a home nearby Vence where he crossed paths with many other artists including Henri Matisse, Fernand Léger, Alexander Calder and Joan Miró, all of whom would go on to be early exhibitors at the Fondation Maeght.
 Like every year, the exhibition sheds light on the greatest masters who revolutionised the art world. However, this year’s chosen theme simultaneously celebrates the special location of the Côte d’Azur and the profound influences it has had on the artists.
--✅ Plan your visit by clicking in the link below:
https://www.operagallery.com/.../the-monaco-masters-show... See less
Courtesy:—  Opera Gallery.

Apr 05, 2021 at 9:48 am

" ದೃಶ್ಯ ಅನಾವರಣ: ಸಮಕಾಲೀನ ಕಲಾ ಪ್ರದರ್ಶನ'24 " Visual Unveiled: The Contemporary Art Show'24

ದೃಶ್ಯ ಅನಾವರಣ: ಸಮಕಾಲೀನ ಕಲಾ ಪ್ರದರ್ಶನ'24 ಅನ್ನು ಸೋಮೇಶ್ ಎನ್ ಸ್ವಾಮಿ @ಚಾರು ಆರ್ಟ್ ಮೈಸೂರು ಗ್ಯಾಲರಿ ಆಗಸ್ಟ್ 25 ರಂದು @ ಬೆಳಿಗ್ಗೆ 11 ಗಂಟೆಗೆ ಹಿರಿಯ ಕಲಾ ವಿಮರ್ಶಕ ಶ್ರೀ ಅವರಿಂದ ಉದ್ಘಾಟನೆ. ಕೆ ವಿ ಸುಬ್ರಮಣಿಯನ್


Visual Unveiled: The Contemporary Art Show'24 Curated by Somesh N Swamy @ Chaaru Art Mysuru Gallery on August 25th @ 11am Inauguration by Senior Art Critic Sri. K V Subramanian & Senior Scientist Smt. Roopa ISRO, Bengaluru, Founder Of Chaaru Art Gallery Smt. Sheela Kumari  On this Exhibition 26 Artists participate from all over Karnataka more than 54 art works including  Painting, Drawing, Print making, Sculptures, Installation also..It's a huge & best space for art showcase in Mysore new Chaaru Art Gallery , R T Nagar. Well supported give this opportunity to us by Smt Sheela Kumari mam & Sri Bheemesh sir  Thanks to giving me one curation show in Mysore.  Show onview until Sept 25th 2024 Thank you  all artists .

Timings 10am- 5pm  visit this new gallery in Mysore. don't miss .....

-----FB.



Apr 05, 2021 at 9:48 am

" Get to know C. S. Krishna Setty, a renowned artist and art critic, "

Get to know C. S. Krishna Setty, a renowned artist and art critic, skillfully captures the essence of society’s energy and evolution through his work. His art expresses his deepest feelings and thoughts, making it a strong voice for both personal and social reflection.

--Jayanthi Shegar

Apr 05, 2021 at 9:48 am

" a fantastic day at Artpark Bengaluru yesterday" "ಬೆಂಗಳೂರಿನ ಆರ್ಟ್ಪಾರ್ಕ್ನಲ್ಲಿ ನಿನ್ನೆ, ರಂಗಶಂಕರ ನಲ್ಲಿ "

ಬೆಂಗಳೂರಿನ ಆರ್ಟ್ಪಾರ್ಕ್ನಲ್ಲಿ ನಿನ್ನೆ, ರಂಗಶಂಕರ ಬೆಂಗಳೂರಿನಲ್ಲಿ ನಡೆದ ಅದ್ಭುತ ದಿನ. ಈ ಆವೃತ್ತಿಯನ್ನು ಡಿಂಪಲ್ ಬಿ ಶಾ ಮತ್ತು ಶಾನ್ ರೆ ಸಂಯೋಜಿಸಿದ್ದಾರೆ, ಅವರ ಎಲ್ಲಾ ಪ್ರಯತ್ನಗಳಿಗೆ ಅಭಿನಂದನೆಗಳು. ವೀರೇಶ್ ರುದ್ರಸ್ವಾಮಿ ಮತ್ತು ಪ್ರದೀಪ್ ಕುಮಾರ್ ಡಿ ಎಂ - ಪ್ರತಿ ಆರ್ಟ್ ಪಾರ್ಕ್ ಈವೆಂಟ್ನ ಬೆನ್ನೆಲುಬು ಮತ್ತು ಸಂಪೂರ್ಣ ಲಾಜಿಸ್ಟಿಕ್ಸ್ ಅನ್ನು ಸಲೀಸಾಗಿ ನಿರ್ವಹಿಸುವವರಿಗೆ ಮೆಚ್ಚುಗೆಯ ಮಾತು. ನಮಗೆಲ್ಲರಿಗೂ ಸ್ಫೂರ್ತಿಯಾಗಿ ಮುಂದುವರಿದಿರುವ ಆರ್ಟ್ ಪಾರ್ಕ್ ಸಂಸ್ಥಾಪಕ ಎಸ್.ಜಿ.ವಾಸುದೇವ್, ಹಾಲಿ ಅಧ್ಯಕ್ಷೆ ಭಾಗ್ಯ ಅಜಯಕುಮಾರ್ ಅವರ ಬೆಂಬಲ ಅಮೂಲ್ಯ. ಕಾರ್ಯಕ್ರಮವನ್ನು ಸೌಜನ್ಯದಿಂದ ನಡೆಸಿಕೊಟ್ಟ ಅರುಂಧತಿ ನಾಗ್ ಮತ್ತು ಕಾರ್ಯಕ್ರಮವನ್ನು ಉದ್ಘಾಟಿಸಲು ರವಿ ಕಾವಲೆ ಒಪ್ಪಿಕೊಂಡರು. ಎಲ್ಲಾ ಸಮಿತಿಯ ಸದಸ್ಯರು ಮತ್ತು ಭಾಗವಹಿಸಿದ ಕಲಾವಿದರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಪಾರ ಕೊಡುಗೆ ನೀಡಿದರು. ಮತ್ತು, ಮುಖ್ಯವಾಗಿ, ಭಾನುವಾರದಂದು ಬಿಡುವು ಮಾಡಿಕೊಂಡು ನಮ್ಮನ್ನು ಭೇಟಿ ಮಾಡಲು ಮತ್ತು ಕಲಾವಿದರೊಂದಿಗೆ ಸಂವಾದ ನಡೆಸಿದ ಜನರು ಅಪಾರ ಸಂಖ್ಯೆಯಲ್ಲಿ ಸೇರಿದ್ದು ಬಹಳ ಸಂತೋಷಕರವಾಗಿತ್ತು. ದಿನ. ಈ ಉಪಕ್ರಮದಲ್ಲಿ ನಮ್ಮನ್ನು ಬೆಂಬಲಿಸುವ ನಮ್ಮ ಪ್ರೇಕ್ಷಕರಿಗೆ ನಾವು ಎಂದೆಂದಿಗೂ ಕೃತಜ್ಞರಾಗಿರುತ್ತೇವೆ. ಕಲೆ, ಕಲಾವಿದರು ಮತ್ತು ಸಮುದಾಯಗಳ ನಡುವಿನ ಅಡೆತಡೆಗಳನ್ನು ಕರಗಿಸುವಲ್ಲಿ ಇಂತಹ ಘಟನೆಗಳು ದೊಡ್ಡ ವ್ಯತ್ಯಾಸವನ್ನುಂಟುಮಾಡುತ್ತವೆ. ಸೆಪ್ಟೆಂಬರ್ನಲ್ಲಿ ಆರ್ಟ್ಪಾರ್ಕ್ ಬೆಂಗಳೂರಿನ ಮುಂದಿನ ಆವೃತ್ತಿಯನ್ನು ವೀಕ್ಷಿಸಿ, ಅಲ್ಲಿ ನಾವು ಮಾಡುತ್ತೇವೆ. ಹೊಸ ಸ್ಥಳದಲ್ಲಿ! ಚಿತ್ರ: ನಿನ್ನೆಯ ಈವೆಂಟ್ನಿಂದ ಒಂದು ಗುಂಪು ಛಾಯಾಚಿತ್ರ

Pic: A group photograph from yesterday's event..

It was a fantastic day at Artpark Bengaluru yesterday, held at Rangashankara Bangalore. This edition was coordinated by Dimple B Shah and Shan Re, congratulations to them for all the effort. A word of appreciation for Veeresh Rudraswami and Pradeep Kumar D M - the backbone of every Art Park event, and who manage the entire logistics effortlessly. SG Vasudev, the founder of Art Park, who continues to be an inspiration for all of us, Bhagya Ajaikumar the current president, whose support is invaluable. Arundhati Nag for graciously hosting the event and Ravi Cavale for agreeing to inaugurate the program. All the committee members and the participating artists who contributed immensely, to make the event successful. And, most importantly, it was great to see a huge turnout of people, who took time off on a Sunday to visit us and interacted with the artists through the day. We're forever grateful to our audiences, who support us in this initiative. It's events like these that make a huge difference in dissolving barriers between art, artists and communities. Watch out for the next edition of Artpark Bengaluru in September, where we will be at a new venue!

 Deccan Herald, Rashmi Vasudeva discusses how art spaces can be innovatively designed to make them more inviting and accessible.Thank you, Rashmi for including my quote ,   SG Vasudev and Artpark Bengaluru find a mention too!


__FB.



Apr 05, 2021 at 9:48 am

" ನಿಸರ್ಗ ಹಲವು ಜೀವಿಗಳನ್ನು ಸೃಷ್ಟಿಸಿದೆ. ಅವುಗಳಲ್ಲಿ ಮನುಷ್ಯ ಪ್ರಾಣಿಯೂ ಒಂದು."
ನಿಸರ್ಗ ಹಲವು ಜೀವಿಗಳನ್ನು ಸೃಷ್ಟಿಸಿದೆ. ಅವುಗಳಲ್ಲಿ ಮನುಷ್ಯ ಪ್ರಾಣಿಯೂ ಒಂದು. ವೈಚಿತ್ರ್ಯವೆಂದರೆ, ವಿಭಿನ್ನ ಸ್ವಭಾವ, ವಿಭಿನ್ನ, ಲಕ್ಷಣ, ವಿಭಿನ್ನ ಹವ್ಯಾಸಗಳು ಮನುಷ್ಯನಲ್ಲಿ ಮಾತ್ರ ಇರುವಂತೆ ಸೃಷ್ಟಿಸಿರುವುದು ಕುತೂಹಲಕರ ಎನಿಸುತ್ತದೆ. ಏಕೆ ಹೀಗೆ? ಎಂದರೆ ಅದು ನಿಸರ್ಗದ ಸ್ವಭಾವ ಅಥವಾ ವೈಶಿಷ್ಟ್ಯ ಎನ್ನಬಹುದು ಅಷ್ಟೆ. ಮನುಷ್ಯರು ಬದುಕಿ ಸಾಯುತ್ತಾರೆ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎಂಬುದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಬದುಕಿರುವವರೆಗೂ ಉಪಜೀವನಕ್ಕೆ ಹಲವು ಕೆಲಸಗಳನ್ನು ಮಾಡುತ್ತಾರೆ. ಉಪಜೀವನಕ್ಕಾಗಿ ಮಾಡುವ ಎಲ್ಲ ಕೆಲಸಗಳೂ ಲೌಕಿಕ ಅಥವಾ ಭೌತಿಕ. ಆದರೆ, ಉಪಜೀವನ ಸಂಬಂಧಿ ಕೆಲಸಗಳಾಚೆಗೆ ಮಾಡುವ ವಿಶಿಷ್ಠ ಪ್ರವೃತ್ತಿಗಳನ್ನು ಕೆಲಸಗಳು ಎನ್ನಲಾಗುತ್ತದೆಯೆ? ಇಲ್ಲ!! ಪ್ರವೃತ್ತಿಯೂ ಹಲವು ಮುಖಗಳಲ್ಲಿ ಕ್ರಿಯಾಶೀಲವಾಗಿರುತ್ತದೆ. ಅಂದರೆ ಚಿತ್ರಿಸುವ, ಶಿಲ್ಪಿಸುವ, ಹಾಡುವ, ನಟಿಸುವ, ಆವಿಷ್ಕರಿಸುವ, ಅನ್ವೇಷಿಸುವ, ಶೋಧಿಸುವ ಮೊದಲಾದ ವಿಷಯಗಳಲ್ಲಿ ಅದು ತಲ್ಲೀನವಾಗಿರುತ್ತದೆ.



ಸಂಗ್ರಹ ಪ್ರವೃತ್ತಿಯನ್ನೂ ಈ ಸಾಲಿಗೆ ಸೇರಿಸಬಹುದು ಎಂದು ನನಗೆ ಇತ್ತೀಚೆಗೆ ಅನಿಸಿದೆ. ಒಂದು ಕಾಲದ ಸೃಷ್ಟಿಯಾಗಿ; ಮನೋಮಯ ಜೀವನವನ್ನು ತುಂಬಿದ್ದ ಈಗ ಬಳಕೆಯಲ್ಲಿ ಇಲ್ಲದ ಸುಂದರ ವಸ್ತುಗಳು, ಬಳಕೆಯಲ್ಲಿದ್ದೂ ಬಳಕೆ ತಪ್ಪಿದ ವಸ್ತುವಾಗಿ ಮೂಲೆ ಸೇರಿದ ಗೃಹೋಪಕರಣಗಳು, ಕಲ್ಪಿತ ರೂಪಸೃಷ್ಟಿಯಾಗಿ ಪೂಜೆಗೊಂಡು ಈಗ ಕಲಾವಸ್ತುವಾಗಿ ಮಾತ್ರ ಉಳಿದ ದೇವರ ಮೂರ್ತಿಶಿಲ್ಪಗಳು, ಪೂಜಾ ಸಾಮಗ್ರಿಗಳು, ಅಳೆಯುವ, ಅರೆಯುವ, ಕತ್ತರಿಸುವ, ಕೊಯ್ಯುವ, ಹೋಳುವ, ಕುಟ್ಟುವ, ಬೀಸುವ, ನೇಯುವ, ತೂಗುವ, ಅಳೆಯುವ, ಅರೆಯುವ, ಸೋಸುವ, ತೊನೆಯುವ, ನೇಯುವ, ತೂಗುವ ತೊಟ್ಟಿಲು, ಬೆಳ್ಳಿ ಕಂಚು, ಹಿತ್ತಾಳೆಯ ಹಲವು ಬಗೆಯ ತಾಟು, ಬಟ್ಟಲು; ನೀರು ತುಂಬಿಸುವ ಹಂಡೆ, ತಪ್ಪೇಲಿಗಳು, ಚಂಬುಗಳು, ಆರತಿ ತಟ್ಟೆಗಳು, ಧೂಪಾರತಿಗಳು, ಪರಾತು, ಗಿಂಡಿ, ದೀಪದ ಗೊಂಚಲು, ಸಮೆಗಳು, ಬೀಟೆ ಮರದ ಫಲ್ಲಂಗ, ಕುರ್ಚಿಗಳು, ಟೀಪಾಯಿಗಳು, ವಿಭೂತಿ ಬುಟ್ಟಿ, ಒಳ್ಳ - ಒಣಕೆ ಒಂದೇ ಎರಡೇ ನೂರಾರು ಬಗೆಯ ವಸ್ತುಗಳ ಸಂಗ್ರಹ ಹುಚ್ಚು ಹಿಡಿ ಸುತ್ತದೆ. ಸುರಪುರ ಗರುಡಾದ್ರಿ, ಮೈಸೂರು, ತಂಜಾವೂರು ಸಾಂಪ್ರದಾಯಿಕ ಚಿತ್ರಗಳು, ಸ್ವತಃ ತಾನು ರಚಿಸಿರುವ ಸೂಕ್ಷ್ಮ ರೇಖೆಗಳ ನೂರಾರು ಚಿತ್ರಗಳು ನೋಡುವುದೆಂದರೆ ಕಣ್ಣಿಗೆ ಹಬ್ಬ ಒಂದು ಕ್ಷಣ,


- ಆದರೆ ನೋಡುತ್ತ ನೋಡುತ್ತ ನೂರಾರು ವರ್ಷಗಳ ಹಿಂದಕ್ಕೆ - ಕಾಲನ ಗರ್ಭಕ್ಕೆ ಸರಿದು - ನಮ್ಮ ಹಿಂದಿನ ಅಂದರೆ ಪೂರ್ವಸೂರಿ ರಸಿಕರು ತಮ್ಮ ಬದುಕನ್ನು ಹೇಗೆ ಸುಂದರವಾಗಿ ರೂಪಿಸಿಕೊಂಡು ಬಂದವರು! ಈಗಿನ ನಮ್ಮ ಬದುಕು ಏಕೆ ಹೀಗಾಗಿದೆ! ಮೇಲೆಲ್ಲಾ ತಳುಕು ಒಳಗೆಲ್ಲ ಹುಳುಕು ಹುಳುಕಾಗಿದೆ? ಟೋಳ್ಳಾಗಿದೆ! ಎಂದು ಚಿಂತೆಗೆ ಈಡುಮಾಡುತ್ತವೆ ಇಲ್ಲಿನ ವಸ್ತುಗಳು. ಈ ಎಲ್ಲ ವಸ್ತುಗಳು ಎಲ್ಲಿವೆ! ಬೇರೆಲ್ಲೂ ಇಲ್ಲ! ಕಲಬುರಗಿಯ ಪ್ರಖ್ಯಾತ ಕಲಾವಿದ ಡಾ ವಿಜಯ ಹಾಗರಗುಂಡಗಿಯವರ ಅಭೂತಪೂರ್ವ ಸಂಗ್ರಹದಲ್ಲಿ. ವಿಜಯ್ ಅವರ ಎರಡ್ಮೂರು ಮನೆಗಳ ಆರೇಳು ಕೋಣೆಗಳಲ್ಲಿ ಈ ಎಲ್ಲ ವಸ್ತುಗಳು ಒಪ್ಪ ಓರಣವಾಗಿ ಇಡಲ್ಪಟ್ಟಿವೆ. ಈ ಮನುಷ್ಯನಿಗೆ ಅದೆಂತಹ ಹುಚ್ಚೋ ತಿಳಿಯದು - ಒಬ್ಬ ಮನುಷ್ಯನಿಂದ ಇದು ಸಾಧ್ಯವೇ ಎಂದು ವಿಸ್ಮಯಗೊಳಿಸುತ್ತದೆ. ಇವರು ಪ್ರಖ್ಯಾತ ಕಲಾವಿದ, ನನ್ನ ಪ್ರಕಾರ ಸಾಂಪ್ರದಾಯಿಕ ಚಿತ್ರಕಲೆಯಲ್ಲಿ ಕರ್ನಾಟಕದಲ್ಲೇ ಸರಿಗಟ್ಟುವವರಿಲ್ಲ! ಅಂತೆಯೇ ಇಂತಹ ಸಂಗ್ರಹದ ವಿಷಯದಲ್ಲೂ! ಕಲಬುರಗಿಯ ವಿಜಯ ಹಾಗರಗುಂಡಗಿ ಅವರಿಗೆ ಅವರೇ ಸಾಟಿ, ಮತ್ತೊಬ್ಬರಿಲ್ಲ! ಇದು ಅತಿಶಯದ ಮಾತೂ ಅಲ್ಲ. ಸ್ತುತಿ - ನಿಂದೆಗಳು ಈ ಮಹಾನ್ ಸಾಧಕನಿಗೆ ಗಣ್ಯವೂ ಅಲ್ಲ. ಇಂತಹ ಮಾತುಗಳ ಕಡೆ ಇವರ ಗಮನವೂ ಇಲ್ಲ! ನೀವೂ ಒಂದು ಅವಕಾಶ ಪಡೆದು ಒಮ್ಮೆಯಾದರೂ ಈ ಸಂಗ್ರಹಕ್ಕೆ ಬೇಟಿಮಾಡಿ ಕಣ್ಮನಗಳನ್ನು ತುಂಬಿಕೊಳ್ಳಲು ಮರೆಯಬೇಡಿ. ಹಾಂ ನೆನಪಿಡಿ, ನಿಮಗೆ ಪ್ರವೇಶ ಸಿಕ್ಕರೆ ಮಾತ್ರ ಅದು ಸಾಧ್ಯ!

---Shivanand Bantanur 

Apr 05, 2021 at 9:48 am

ಧಾರವಾಡದಲ್ಲಿ (17_18 ಆಗಸ್ಟ್ ,2024) ನಡೆದ " ಚಿಣ್ಣರ ಚಿತ್ರಚಿತ್ತಾರ "
ಧಾರವಾಡದಲ್ಲಿ (17_18 ಆಗಸ್ಟ್ ,2024) ನಡೆದ " ಚಿಣ್ಣರ ಚಿತ್ರಚಿತ್ತಾರ " ಅಪೂರ್ವ ವ್ಯವಸ್ಥೆಯ ಕಲೆಯ ಉತ್ಸವದಲ್ಲಿ ನನ್ನನ್ನು ಪ್ರೀತಿಯಿಂದ "ದೃಶ್ಯಾಕ್ಷರ ಸಂತ "ನೆಂದು ಕರೆದು ಸನ್ಮಾನಿಸಿ ನೀಡಿದ ಪ್ರಶಸ್ತಿಯ ಸ್ಮರಣಿಕೆ. ಅಲ್ಲಿನ ಕೃಷಿವಿಶ್ವವಿದ್ಯಾಲಯದ ವಿಶಿಷ್ಟ ಸಭಾಂಗಣದಲ್ಲಿ 2 ದಿನ ನಡೆದ, ಖಂಡಿತ ಈ ಅಪೂರ್ವ ಸಮಾರಂಭಕ್ಕೆ,ಗದಗದ ಬಣ್ಣದಮನೆ ಸಾಂಸ್ಕೃತಿಕ ವೇದಿಕೆ, ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಮತ್ತು ಬೆಂಗಳೂರಿನ ಬಾಲಭವನ ಸೊಸೈಟಿಗಳ ಆಶ್ರಯವಿದ್ದಿತು. ಕಲೆಯ ಕಾರ್ಯಕ್ರಮಗಳಿಗೆ ಸಾವಿರಾರು ಜನ ಬಂದು ಹೋದುದನ್ನು, ಇದೇ ಮೊದಲ ಬಾರಿಗೆ ನಾನು ನೋಡಿದೆ.



ಅಸಾಮಾನ್ಯ ಕಾರ್ಯ ಸಂಘಟನಾ  ಚಾತುರ್ಯದ,   ಶ್ರಮ, ಸಹನೆಗಳ ಸಂಗಮವೇ  ಈ 2023-24 ರ  ಕಾರ್ಯಕ್ರಮ.  ನೂರಾರು ಮಕ್ಕಳಿಗೆ ದೇಶ ವಿದೇಶಗಳ  ಅಸಾಮಾನ್ಯಕಲಾವಿದ, ಕಲಾವಿದೆಯರ ಹೆಸರಿನಲ್ಲಿ ಪುಟ್ಟ ಕಲಾವಿದ ಪ್ರಶಸ್ತಿಗಳನ್ನು ನೀಡಲಾಯಿತು. "ಮೊನಾಲಿಸಾ", "ವ್ಯಾನ್ ಗಾಗ್" ಶೀರ್ಷಿಕೆಯ ಹೊಸ ನಾಟಕಗಳು ಪ್ರದರ್ಶಿಸಲ್ಪಟ್ಟವು!  ಹಾಸನದ ಚಿತ್ಕಲಾ ಸಂಸ್ಥೆಯ ಪುಟ್ಟ ಕಲಾವಿದ ಕಲಾವಿದೆಯರು ಸುಮಾರು 20 ಅಡಿಗಳ ವಿಶಿಷ್ಟ ಸುಂದರ ಭೂಧೃಶ್ಯವನ್ನು ವೇದಿಕೆಯಲ್ಲಿ ಚಿತ್ರಿಸಿದರು : ಇದೊಂದು ಹೊಸ ವಿಶಿಷ್ಟ ಪ್ರಯೋಗವೇ ಸರಿ. ಹಲವು ಮಾಧ್ಯಮಗಳ ಚಿತ್ರಕಲಾಕೃತಿಗಳು ಪ್ರದೇಶಿಸಲ್ಪಟ್ಟಿದ್ದವು. ಕಾರ್ಪೊರೇಟ್ ಸಂಸ್ಥೆಗಳ ಶಿಸ್ತಿನ ಕಾರ್ಯಕ್ರಮಗಳಿಗೆ ಸಮನಾಗಿ ನಡೆದ ವ್ಯವಸ್ಥೆಗಳು ಬಹುಶಹ ಎಲ್ಲರ ಗಮನ ಸೆಳೆದಿವೆ.
--KV Subramanyam

Apr 05, 2021 at 9:48 am

solo Art Exhibition called "The Wizard of Claws"
ಇದು ಎಲ್ಲಾ ಕಲಾ ಆಸಕ್ತರಿಗೆ, ಕುಟುಂಬ ಮತ್ತು ಸ್ನೇಹಿತರಿಗೆ ಆತ್ಮೀಯ ಆಹ್ವಾನವಾಗಿದೆ. ನನ್ನ ಏಕವ್ಯಕ್ತಿ ಕಲಾ ಪ್ರದರ್ಶನಕ್ಕೆ ನಿಮ್ಮೆಲ್ಲರನ್ನು ಆಹ್ವಾನಿಸಲು ನನಗೆ ಅಪಾರ ಸಂತೋಷವನ್ನು ತುಂಬುತ್ತದೆ  "ದಿ ವಿಝಾರ್ಡ್ ಆಫ್ ಕ್ಲಾಸ್" ಇಂಡಿಯಾ ಹ್ಯಾಬಿಟಾಟ್ ಸೆಂಟರ್ನಲ್ಲಿ - ಕನ್ವೆನ್ಷನ್ ಸೆಂಟರ್ ಫೋಯರ್ ಆಗಸ್ಟ್ 26 ರಿಂದ 2024 ರ ಆಗಸ್ಟ್ 30 ರವರೆಗೆ ಬೆಳಿಗ್ಗೆ 11:00 ರಿಂದ ಸಂಜೆ 07:00 ರವರೆಗೆ.  ನನ್ನ ಕಲಾತ್ಮಕ ಪ್ರಯಾಣದ ಪರಿಮಾಣಗಳನ್ನು ಹೇಳುವ ನನ್ನ ಫ್ಯಾಂಟಸಿ ಜಗತ್ತಿನಲ್ಲಿ ದಯವಿಟ್ಟು ನನ್ನನ್ನು ಸೇರಿಕೊಳ್ಳಿ. ಓಝ್ ಭೂಮಿಯಲ್ಲಿ ಡೊರೊಥಿಯ ಸಾಹಸಗಳ ಕಾಲ್ಪನಿಕ ಕಥೆಯ ದೃಶ್ಯ ಚಿತ್ರಣವು ಸಾಂಕೇತಿಕವಾಗಿ ದೀಪಶಿಖಾ ಅವರ ಸಾಹಸಗಳನ್ನು ಪ್ರತಿನಿಧಿಸುತ್ತದೆ. --Deepshikha Bishoyi




This is a Cordial Invitation for all Art enthusiasts, family and friends. 
It fills me with immense pleasure to invite you all for my solo Art Exhibition called 
"The Wizard of Claws"
At the India Habitat Centre - Convention Center Foyer 
Starting from 26th of August till 30th of August 2024
11:00 am to 07:00pm. 
Please do join me in my fantasy world that speaks volumes of my artistic journey. A visual depiction of the fantasy tale of Dorothy's adventures in the land of Oz symbolically represented as Deepshikha's adventures. --Deepshikha Bishoyi

Apr 05, 2021 at 9:48 am

" ಹೈದರಾಬಾದಿನ ಅನ್ಡಿಸಿಫರ್ಡ್ ಕಲಾ ಪ್ರದರ್ಶನವು ನಾಗರಿಕತೆಯ ಕಥೆಯನ್ನು ಹೇಳಲು ಬಣ್ಣಗಳು,"
ಹೈದರಾಬಾದಿನ ಅನ್ಡಿಸಿಫರ್ಡ್ ಕಲಾ ಪ್ರದರ್ಶನವು ನಾಗರಿಕತೆಯ ಕಥೆಯನ್ನು ಹೇಳಲು ಬಣ್ಣಗಳು, ಮಾದರಿಗಳು ಮತ್ತು ಸಂಕೇತಗಳನ್ನು ಸಂಯೋಜಿಸುತ್ತದೆ
ಏಕವ್ಯಕ್ತಿ ಕಲಾ ಪ್ರದರ್ಶನದಲ್ಲಿ ಕಲಾವಿದ ಶ್ರೀನಿವಾಸ ಬಾಬು ಅಂಗಾರ ಅವರು ಸಿಂಧೂ-ಸರಸ್ವತಿ ನಾಗರಿಕತೆಯ ಗ್ಲಿಂಪ್ಸ್ ಅನ್ನು ಮರುಸೃಷ್ಟಿಸಿದರು.

ಇತಿಹಾಸವನ್ನು ಅನುಸರಿಸುವ ಜನರಿದ್ದಾರೆ. ನಂತರ ಇತಿಹಾಸ ಉತ್ಸಾಹಿಗಳಿದ್ದಾರೆ. ಶ್ರೀನಿವಾಸ ಬಾಬು ಅಂಗಾರ ಇಬ್ಬರಿಗಿಂತ ತುಸು ಭಿನ್ನ. ಕಲಾವಿದ, ಒಳಾಂಗಣ ವಿನ್ಯಾಸಕಾರ ಮತ್ತು ಶಿಲ್ಪಿ, ಅವರು ಇತಿಹಾಸವನ್ನು ತೀವ್ರ ಆಸಕ್ತಿಯಿಂದ ಅಧ್ಯಯನ ಮಾಡುತ್ತಾರೆ ಮತ್ತು ಇತಿಹಾಸದ ದೃಶ್ಯಗಳನ್ನು ಚಿತ್ರಿಸಲು ಹೋಗುತ್ತಾರೆ. ಅವರ ಕಲಾಕೃತಿಗಳು ಪ್ರಾಚೀನ ನಗರಗಳು ಮತ್ತು ಉತ್ಖನನ ಸ್ಥಳಗಳ ನಕ್ಷೆಗಳ 3D ಮನರಂಜನೆಗಳನ್ನು ಒಳಗೊಂಡಿವೆ. ಅವರ ಕಲಾ ಪ್ರದರ್ಶನದಲ್ಲಿ, ಅನ್ಡಿಸಿಫರ್ಡ್, ಅವರು ತಮ್ಮ ಕೆಲಸವನ್ನು ತೋರಿಸುತ್ತಾರೆ, ಇದರಲ್ಲಿ ಅವರು ಸಿಂಧೂ-ಸರಸ್ವತಿ ನಾಗರಿಕತೆಯ ಅಧ್ಯಯನಗಳಿಂದ ಸ್ಫೂರ್ತಿ ಪಡೆದರು. ಪ್ರದರ್ಶನದಲ್ಲಿರುವ ಅವರ ಬಹುಪಾಲು ಕಲಾಕೃತಿಗಳು ಕ್ಯಾನ್ವಾಸ್ನಲ್ಲಿ ಅಕ್ರಿಲಿಕ್ ಆಗಿದೆ. ಲೋಹೀಯ PU (ಬಣ್ಣಗಳು) ಜೊತೆಗೆ ಸಿಂಪಡಿಸಲಾದ ಅಸಿಟಿಕ್ ಆಮ್ಲದಲ್ಲಿ ಅವನು ಕೆಲವು ಉಕ್ಕನ್ನು ಪ್ರದರ್ಶಿಸುತ್ತಾನೆ. ಈ ಹಾಳೆಗಳು ಮೊಹೆಂಜೋದಾರೋ ನಾಗರಿಕತೆಯ ಬೀದಿ ವ್ಯವಸ್ಥೆಯ 3D ಪ್ರಾತಿನಿಧ್ಯವಾಗಿದೆ.     

ಇತಿಹಾಸದಲ್ಲಿ ಅವರ ಆಸಕ್ತಿಯು ಸಂಕೇತ ಭಾಷೆ, ಸಂಕೇತಗಳು ಮತ್ತು ಅಂಚೆಚೀಟಿಗಳ ವ್ಯವಸ್ಥೆಯನ್ನು ಹೋಲಿಸಲು ಕಾರಣವಾಯಿತು. ಹಾಗೆ ಮಾಡುವ ಮೂಲಕ ಶ್ರೀನಿವಾಸರು ಬಣ್ಣಗಳ ಸೌಂದರ್ಯಶಾಸ್ತ್ರವು ಚಿಹ್ನೆಗಳ ಚಿತ್ರಕಲೆ ಮತ್ತು ಪ್ರಾಚೀನ ಸಂಖ್ಯಾ ವ್ಯವಸ್ಥೆಯಂತಹ ಸರಳವಾದದ್ದನ್ನು ಏನು ಮಾಡಬಹುದು ಎಂಬುದನ್ನು ತೋರಿಸುತ್ತದೆ.
COURTESY : https://www.thehindu.com/entertainment/art/undeciphered-by-srinivasa-babu-angara-combines-colours-patterns-and-symbols-tell-the-story-of-civilisation/article68528288.ece

Apr 05, 2021 at 9:48 am

" ಕಲಬುರಗಿಯ ಛಾಯಾಗ್ರಹಣ ಜೀವಿ ಶ್ರೀ ಯುತ ಎನ್. ಎಂ.ಜೋಶಿ ಯವರಿಂದ ಛಾಯಾಚಿತ್ರ ಪ್ರದರ್ಶನ "
ಛಾಯಾಗ್ರಹಣವನ್ನೇ ಬದುಕೆಳೆಯುವ ಪ್ರಧಾನ ಬಂಡಿಯನ್ನಾಗಿಸಿಕೊಂಡು, ಪತ್ರಿಕಾ ವರದಿಗಾರಿಕೆಯನ್ನು ಹವ್ಯಾಸವಾಗಿರಿಸಿಕೊಂಡು ಲವಲವಿಕೆಯಿಂದ ಜೀವನ ಸಾಗಿಸುತ್ತಿರುವ ಕಲಬುರಗಿ ನೆಲದ ಪುತ್ರ ಎನ್. ಎಂ.ಜೋಶಿ ಎಂದೇ ಸ್ಥಳೀಕರಿಂದ ಗುರ್ತಿಸಿಕೊಂಡಿರುವ ನಾರಾಯಣ ಮಧುಕರ ಜೋಶಿಯವರ ಛಾಯಾಚಿತ್ರಗಳ ಪ್ರದರ್ಶನ ಕಲಬುರಗಿಯ ಎಂ.ಎಂ.ಕೆ ಕಾಲೇಜಿನ ಮಾತೋಶ್ರೀ ನೀಲಗಂಗಮ್ಮ ಗುರಪ್ಪಾ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ದಿ -19.8.2024 ರಿಂದ 21.8.2024ರವರೆಗೆ ಆಯೋಜನೆಗೊಳ್ಳಲಿಕ್ಕಿದೆ. ಮೂಲತಃ ಇವರ ಮನೆತನ ಕಲಬುರಗಿ ಜಿಲ್ಲಾ ಆಳಂದ ತಾಲೂಕಿನ ಚಿಂಚನಸೂರ್ ನಲ್ಲಿರುವಂತಹುದು.ಆದರೆ ಇವರು ಜನ್ಮಿಸಿ ಬಾಳುತ್ತಿರುವ ನೆಲ ಕಲಬುರಗಿ ಪಟ್ಟಣ.



ಎನ್. ಎಂ.ಜೋಶಿ ಬಸವರಾಜ ಉಪ್ಪಿನ ಎಂಬ ಕಲಬುರಗಿಯ ಖ್ಯಾತ ಹಾಗೂ ಹಿರಿಯ ಚಿತ್ರಕಾರರ ಸಲಹೆಯ ಮೇರೆಗೆ ಪ್ರೊ.ವಿ.ಜಿ.ಅಂದಾನಿಯವರ ದಿ ಐಡಿಯಲ್ ಫೈನ್ ಆರ್ಟ್ ಇನ್ಸ್ಟಿಟ್ಯೂಟ್ ನಲ್ಲಿ (1994ರಲ್ಲಿ)ಚಿತ್ರ ಕಲಾ ಡಿಪ್ಲೊಮಾ ಅಭ್ಯಸಿಸಿದವರು ನಂತರ ಮನೆಯಲ್ಲಿ ಆರ್ಥಿಕ ತೊಂದರೆಯ ಕಾರಣದಿಂದ ಉದರಂಭರಣಕ್ಕಾಗಿ ಛಾಯಾಗ್ರಹಣ ಕೆಲಸದಲ್ಲಿ ತೊಡಗಿಸಿಕೊಂಡವರು.ಛಾಯಾಗ್ರಹಣ ದಲ್ಲಿ ಅಧಿಕೃತತೆ ಪಡೆದುಕೊಳ್ಳಲು ಕಲಬುರಗಿಯ ಒಂದು ಗ್ರಾಮೀಣ ಉದ್ಯೋಗ ಹಾಗೂ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಒಂದು ವರ್ಷದ ಛಾಯಾಗ್ರಹಣ ತರಬೇತಿ ಪಡೆದುಕೊಂಡವರು. ತಮ್ಮ ಕಷ್ಟ ಏನೇ ಇರಲಿ, ಮಂದಿ ಕಷ್ಟ ಪರಿಹಾರ ಕಾಣೋದು ಮುಖ್ಯ ಎಂಬುದು ಇವರ ಸಿದ್ಧಾಂತ ಎಂದರೂ ಒಪ್ಪತಕ್ಕ ಮಾತೇ.ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾದ(ಈಗಲೂ ಒಳಗಾಗುತ್ತಿರುವ)ಚಿತ್ರ ಕಲಾ ಡಿಪ್ಲೊಮಾ/ಚಿತ್ರ ಕಲಾ ಪದವೀಧರರೆಂಬ ಅತ್ಯಂತ ಅಲ್ಪಸಂಖ್ಯಾತ ವರ್ಗಕ್ಕೆ ನ್ಯಾಯ ಒದಗಿಸಬೇಕೆಂಬ ಮಹದೋದ್ದೇಶದಿಂದ ಹುಟ್ಟಿದ ಚಿತ್ರ ಕಲಾ ಪದವೀಧರರ ಒಕ್ಕೂಟದ ಕಲಬುರಗಿ(ಆಗಿ ಗುಲಬರ್ಗಾ)ಜಿಲ್ಲಾ ಚಿತ್ರ ಕಲಾ ಪದವೀಧರರ ಒಕ್ಕೂಟದ ಕಾರ್ಯ ದರ್ಶಿಯಾಗಿ, ಅಧ್ಯಕ್ಷರಾಗಿ ಹೋರಾಟ ಮಾಡಿ ಸರ್ಕಾರದಿಂದ ಕೇಸ್ ಹಾಕಿಸಿಕೊಂಡು ಅವಸ್ಥೆ ಪಟ್ಟ ಧೀಮಂತರಲ್ಲಿ ಎನ್. ಎಂ.ಜೋಶಿ ಯವರೂ ಒಬ್ಬರು. (ಕೊನೆಗೆ ಇವರ ಹೋರಾಟ ಆಗಿನ ಪ್ರಾಥಮಿಕ & ಪ್ರೌಢ ಶಿಕ್ಷಣ ಮಂತ್ರಿ ಗೋವಿಂದೇಗೌಡರವರ ಗಮನಕ್ಕೆ ಬಂದು ಆಗಿನ ಸರ್ಕಾರ ಒಂದಿಷ್ಟು ಚಿತ್ರ ಕಲಾ ಡಿಪ್ಲೊಮಾಧರರಿಗೆ ಕೆಲಸ ನೀಡಿತು(ಆದರೆ ಜೋಶಿಯವರಿಗೆ ಏನೂ ಪ್ರಯೋಜನ ಆಗಲಿಲ್ಲ ಎನ್ನಿ)). ಇದೀಗ ಛಾಯಾಗ್ರಹಣ ವನ್ನೇ ಪ್ರಧಾನ ವೃತ್ತಿ ಪ್ರವೃತ್ತಿಯಾಗಿ ಮಾಡಿಕೊಂಡಿದ್ದಾರೆ.ನಾರಾಯಣ ಜೋಶಿಯವರ ಆಸಕ್ತಿ ಹೆಚ್ಚು ಕೇಂದ್ರೀಕೃತವಾಗಿರುವುದು ಕಲ್ಯಾಣ ಕರ್ನಾಟಕ ಭಾಗದ ಐತಿಹಾಸಿಕ-ಸಾಂಸ್ಕೃತಿಕ ವಿಶೇಷಗಳನ್ನು ಕ್ಯಾಮರಾ ಕಣ್ಣಲ್ಲಿ ದಾಖಲಿಸುವುದರಲ್ಲಿ.ಹಾಗಾಗಿ ಕಲಬುರಗಿ, ಬೀದರ್, ರಾಯಚೂರು ಈ ಭಾಗಗಳ ಕೆಲವು ಐತಿಹಾಸಿಕ ಸ್ಮಾರಕಗಳು, ಅನನ್ಯ ಸಾಂಸ್ಕೃತಿಕ ಸಂದರ್ಭಗಳನ್ನು ಕ್ಲಿಕ್ಕಿಸಿದ್ದಾರೆ.ಮೋಡಕವಿದ /ಮಂದಬೆಳಕಿನ ಸನ್ನಿವೇಶವನ್ನು ಕೂಡಾ ಸುಸ್ಪಷ್ಟವಾಗಿ,ಆಕರ್ಷಕ ಕೋನದಲ್ಲಿ ಸೆರೆಹಿಡಿಯುವುದು ಇವರ ಚಾಕಚಕ್ಯತೆ.
"ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ವೈಶಿಷ್ಟ್ಯಪೂರ್ಣ ಐತಿಹಾಸಿಕ-ಸಾಂಸ್ಕೃತಿಕ ಸ್ಮಾರಕಗಳು ,ತಾಣಗಳು ಇವೆ.ಅವುಗಳಲ್ಲಿ ಬಹಳಷ್ಟು ಅಳಿವಿನಂಚನಲ್ಲಿವೆ.ಅದಕ್ಕೆ ಸಮಾಜ ಹಾಗೂ ನಮ್ಮನ್ನಾ ಳುವ ಸರ್ಕಾರಗಳ ನಿರ್ಲಕ್ಷ್ಯ ಕಾರಣ.ಹಾಗಾಗಿ ನಮ್ಮ ಮುಂದಿನ ಪೀಳಿಗೆ ಇಂಥವುಗಳೆಲ್ಲಾ ನಮ್ಮ ಭಾಗದಲ್ಲಿ ಇದ್ದವು ಎಂಬುದನ್ನು ಛಾಯಾಚಿತ್ರಗಳಲ್ಲಾದರೂ ಕಂಡು ಬೆರಗುಗೊಳ್ಳುವಂತಾಗಲಿ.. ಎಂಬ ಉದ್ದಿಶ್ಯದಿಂದ ನಾನು ಕಲ್ಯಾಣ ಕರ್ನಾಟಕ ಭಾಗಗಳ ಅಮುಲ್ಯ ಸ್ಮಾರಕಗಳು, ಸಾಂಸ್ಕೃತಿಕ ಕುರುಹುಗಳತ್ತ ಪ್ರಧಾನ ಲಕ್ಷ್ಯ ವಹಿಸಿ ಛಾಯಾಗ್ರಹಣ ನಡೆಸುತ್ತೇನೆ" ಎಂಬುದು ಶ್ರೀ ಯುತ ನಾರಾಯಣ ಜೋಶಿಯವರ ಅಭಿಪ್ರಾಯ. ಇವರಿಗೆ ಪತ್ರಿಕೆ ವರದಿಗಾರಿಕೆಯಂತೆಯೇ ರಂಗ ಚಟುವಟಿಕೆಯಲ್ಲೂ ಸಹ ಆಸಕ್ತಿ ಇದೆ. ಹಿಂದೊಮ್ಮೆ ಸುರೇಶ್ ಬಿ ಎನ್ನುವವರ 'ಅರ್ಥ' ಸಿನೇಮಾದಲ್ಲಿ ಸಣ್ಣ ಪಾತ್ರ ಮಾಡಿದ್ದೂ ಉಂಟು. ಎನ್ ಎಂ.ಜೋಶಿ ಶುದ್ಧ ಹಸ್ತರು, ಮುಗ್ಧ ಮನಸ್ಥಿತಿಯವರೂ ಸಹ.ದುಡ್ಡು ಗಳಿಸುವ ಎಲ್ಲ ವಾಮಮಾರ್ಗಗಳಿಂದಲೂ ಇವರು ದೂರ.ಹಾಗಾಗಿ ಆರ್ಥಿಕ ಅಡಚಣೆ ಇವರಿಗೆ ನಿತ್ಯ ಸಂಗಾತಿ ಎಂದರೂ ಸರಿಯೇ.

ತಮ್ಮೆಲ್ಲ ಹಣಕಾಸು ತೊಂದರೆ ನಡುವೆಯೂ ವಿಶ್ವ ಛಾಯಾಗ್ರಹಣದಿನವಾದ ಆಗಸ್ಟ್19ನೇ ತಾರೀಖಿನಂದು ಛಾಯಾಗ್ರಹಣ ಪ್ರದರ್ಶನ ಆಯೋಜಿಸಿರುವ ಶ್ರೀ ಯುತ ಜೋಶಿಯವರು ಅಭಿನಂದನಾರ್ಹರು.ಸುಮಾರು 62ಛಾಯಾಚಿತ್ರಗಳು ಇಲ್ಲಿ ಪ್ರದರ್ಶನ ಕಾಣಲಿದ್ದು ಕೆಲವು8ಇಂಚು×12ಇಂಚು ,ಮತ್ತೆ ಕೆಲವು 12ಇಂಚು×18ಇಂಚು ಅಳತೆಯವು. ಈ ಪ್ರದರ್ಶನದ ಉದ್ಘಾಟನೆ ಅವರ ಕಲಾಗುರುಗಳೂ,ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತರೂ,ಗುಲ್ಬರ್ಗ ವಿ ವಿಯ ಗೌರವ ಡಾಕ್ಟರೇಟ್ ಭಾಜನರೂ ,ಕಲಬುರಗಿಯ ಹಿರಿಯ ಕಲಾವಿದರುಗಳಲ್ಲಿ ಒಬ್ಬರೂ ಹಾಗೂ ನಾಡಿನ ಪ್ರಸಿದ್ಧ ದೃಶ್ಯ ಕಲಾವಿದರುಗಳಲ್ಲಿ ಒಬ್ಬರೂ ಆದ ಪ್ರೊ.ವಿ.ಜಿ ಅಂದಾನಿಯವರಿಂದ ಆಗಲಿದೆ. ವಿಶ್ವ ಛಾಯಾಗ್ರಹಣ ದಿನವನ್ನು(19.8.2024)ತಮ್ಮ ಛಾಯಾಚಿತ್ರಗಳ ಪ್ರದರ್ಶನ ಆಯೋಜನೆ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಿರುವ ಏವತ್ತೈದರ ಹರೆಯದ (ಜನನ-1970)ಶ್ರೀಯುತ ನಾರಾಯಣ ಮಧುಕರ ಜೋಶಿಯವರಿಗೆ ಹೃತ್ಪೂರ್ವಕ ಶುಭಹಾರೈಕೆದತ್ತಾತ್ರೇಯ ಎನ್. ಭಟ್ಟ(ಛಾಯಾಚಿತ್ರ ಕೃಪೆ-ಎನ್. ಎಂ.ಜೋಶಿ)

--Dattatreya N Bhat.
  

Apr 05, 2021 at 9:48 am


kkkkkk

kkkkkk

kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img