logo

ಕಲಾ
ಕರ್ನಾಟಕ

www.kalakarnataka.com

ಸುವಿಚಾರ
ಬುದ್ಧನಾದ ; ಬದ್ಧನಾದ..????ಸಿದ್ಧನಾದ ಸಿದ್ಧಾರ್ಥ ತನ್ನ ಸಿದ್ಧಾಂತ ಸಾಧನೆಗೆ , ಸತ್ಯದ ಪಥದತ್ತ ಸಾಗಲು ಶಪಥಗೈದ, ಆಶೆಗಳ ಮೆಟ್ಟಿ ಗಟ್ಟಿ ಮನದಿ ತೆರೆದ ಹೊಸ ಮನ್ವಂತರದ ಕಾರುಣ್ಯದ ಶಾಂತಿ ಬಾಗಿಲು. ಬದುಕಿನ ನಿಜ ಸಾರ ತಿಳಿದೆದ್ದ , ಬುದ್ಧನಾದ, ಬದ್ಧನಾದ.. ...ಶಿ.ಗು.ಕುಸುಗಲ್ಲ
- - ಶಿ.ಗು.ಕುಸುಗಲ್ಲ

ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಸಪ್ಟೆಂಬರ್ 10 ರಿಂದ 16-2024 ರವರೆಗೆ 'ಕಲರಾ೯ಗ್ ' ಏಕವ್ಯಕ್ತಿ ಕಲಾಪ್ರದರ್ಶನ

ಕಲಾಸುದ್ದಿ
Published By: Kala Karanataka
Last Updated Date:  21-Aug-2024
ಧಾರವಾಡದಲ್ಲಿ (17_18 ಆಗಸ್ಟ್ ,2024) ನಡೆದ " ಚಿಣ್ಣರ ಚಿತ್ರಚಿತ್ತಾರ "

ಧಾರವಾಡದಲ್ಲಿ (17_18 ಆಗಸ್ಟ್ ,2024) ನಡೆದ " ಚಿಣ್ಣರ ಚಿತ್ರಚಿತ್ತಾರ " ಅಪೂರ್ವ ವ್ಯವಸ್ಥೆಯ ಕಲೆಯ ಉತ್ಸವದಲ್ಲಿ ನನ್ನನ್ನು ಪ್ರೀತಿಯಿಂದ "ದೃಶ್ಯಾಕ್ಷರ ಸಂತ "ನೆಂದು ಕರೆದು ಸನ್ಮಾನಿಸಿ ನೀಡಿದ ಪ್ರಶಸ್ತಿಯ ಸ್ಮರಣಿಕೆ. ಅಲ್ಲಿನ ಕೃಷಿವಿಶ್ವವಿದ್ಯಾಲಯದ ವಿಶಿಷ್ಟ ಸಭಾಂಗಣದಲ್ಲಿ 2 ದಿನ ನಡೆದ, ಖಂಡಿತ ಈ ಅಪೂರ್ವ ಸಮಾರಂಭಕ್ಕೆ,ಗದಗದ ಬಣ್ಣದಮನೆ ಸಾಂಸ್ಕೃತಿಕ ವೇದಿಕೆ, ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಮತ್ತು ಬೆಂಗಳೂರಿನ ಬಾಲಭವನ ಸೊಸೈಟಿಗಳ ಆಶ್ರಯವಿದ್ದಿತು. ಕಲೆಯ ಕಾರ್ಯಕ್ರಮಗಳಿಗೆ ಸಾವಿರಾರು ಜನ ಬಂದು ಹೋದುದನ್ನು, ಇದೇ ಮೊದಲ ಬಾರಿಗೆ ನಾನು ನೋಡಿದೆ.



ಅಸಾಮಾನ್ಯ ಕಾರ್ಯ ಸಂಘಟನಾ  ಚಾತುರ್ಯದ,   ಶ್ರಮ, ಸಹನೆಗಳ ಸಂಗಮವೇ  ಈ 2023-24 ರ  ಕಾರ್ಯಕ್ರಮ.  ನೂರಾರು ಮಕ್ಕಳಿಗೆ ದೇಶ ವಿದೇಶಗಳ  ಅಸಾಮಾನ್ಯಕಲಾವಿದ, ಕಲಾವಿದೆಯರ ಹೆಸರಿನಲ್ಲಿ ಪುಟ್ಟ ಕಲಾವಿದ ಪ್ರಶಸ್ತಿಗಳನ್ನು ನೀಡಲಾಯಿತು. "ಮೊನಾಲಿಸಾ", "ವ್ಯಾನ್ ಗಾಗ್" ಶೀರ್ಷಿಕೆಯ ಹೊಸ ನಾಟಕಗಳು ಪ್ರದರ್ಶಿಸಲ್ಪಟ್ಟವು!  ಹಾಸನದ ಚಿತ್ಕಲಾ ಸಂಸ್ಥೆಯ ಪುಟ್ಟ ಕಲಾವಿದ ಕಲಾವಿದೆಯರು ಸುಮಾರು 20 ಅಡಿಗಳ ವಿಶಿಷ್ಟ ಸುಂದರ ಭೂಧೃಶ್ಯವನ್ನು ವೇದಿಕೆಯಲ್ಲಿ ಚಿತ್ರಿಸಿದರು : ಇದೊಂದು ಹೊಸ ವಿಶಿಷ್ಟ ಪ್ರಯೋಗವೇ ಸರಿ. ಹಲವು ಮಾಧ್ಯಮಗಳ ಚಿತ್ರಕಲಾಕೃತಿಗಳು ಪ್ರದೇಶಿಸಲ್ಪಟ್ಟಿದ್ದವು. ಕಾರ್ಪೊರೇಟ್ ಸಂಸ್ಥೆಗಳ ಶಿಸ್ತಿನ ಕಾರ್ಯಕ್ರಮಗಳಿಗೆ ಸಮನಾಗಿ ನಡೆದ ವ್ಯವಸ್ಥೆಗಳು ಬಹುಶಹ ಎಲ್ಲರ ಗಮನ ಸೆಳೆದಿವೆ.
--KV Subramanyam


kkkkkk

kkkkkk

kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img