
Published By: Kala Karanataka
Last Updated Date: 04-Aug-2024
" ನಿಮ್ಮ ಮಗು ಗೋಡೆ ಮೇಲೆಲ್ಲಾ ಗೀಚುತಿದೆಯೇ? "
ನಿಮ್ಮ ಮಗು ಗೋಡೆ ಮೇಲೆಲ್ಲಾ ಗೀಚುತಿದೆಯೇ? ಹಾಗಿದ್ದರೆ ಈ ಸುದ್ದಿ ನೀವು ಓದಲೇಬೇಕು....
ಈ ಕಲಾಕೃತಿ Cy ಟುಂಬಲಿ (1928–2011) ಎಂಬ ಕಲಾವಿದನದು, ಈತ ರಚಿಸಿದ್ದು ಕೇವಲ ನೂರು ಕಲಾಕೃತಿಗಳು ಅಥವಾ 125 ಇದ್ದಿರಬೇಕು. ಒಂದು ಸಂಜ್ಞೆಯ ಶಬ್ದಕೋಶವನ್ನು ಅಭಿವೃದ್ಧಿಪಡಿಸಿದನೆಂಬ ಕಾರಣದಿಂದ ಈ ಕಲಾವಿದನಿಗೆ ಮಹತ್ವ ದೊರೆತಿದೆ. ಈ ಕಲಾಕೃತಿಯಲ್ಲಿ ಪ್ರತಿಯೊಂದು ಸಾಲು ಮತ್ತು ಬಣ್ಣವು ಶಕ್ತಿ, ಆಧ್ಯಾತ್ಮಿಕತೆ ಮತ್ತು ಅರ್ಥದಿಂದ ತುಂಬಿರುತ್ತದೆ ಎಂಬುದು ವಾದ. ಯುರೋಪ್ ಮತ್ತು ಉತ್ತರ ಆಫ್ರಿಕಾದಾದ್ಯಂತ ವ್ಯಾಪಕ ಪ್ರಯಾಣದ ನಂತರ 1950 ರ ದಶಕದ ಮಧ್ಯಭಾಗದಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದು ಆತ ಕಲೆಯೊಂದಿಗೆ ಇತರ ಪ್ರಕಾರಗಳ ಸಾಧಕರೊಂದಿಗೆ ಹೊಂದಿದ್ದ ಸ್ನೇಹಭಾವವೂ ಕಾರಣ ಇದ್ದಿರಬಹುದು.
ನಮ್ಮಲ್ಲಿ ಈ ರೀತಿಯ ಸ್ನೇಹಭಾವಗಳು ಇತ್ತೀಚಿಗೆ ಕಡಿಮೆಯಾಗಿಬಿಟ್ಟಿವೆ! (ನಮಗೆ ನಾವೇ ಮಹಾನ್) ಅ ಕಲಾವಿದ ಏಕಕಾಲದಲ್ಲಿ ಸ್ವಜೀವನ ಮತ್ತು ಪೌರಾಣಿಕ ವಿಷಯಗಳ ಕೃತಿಗಳನ್ನು ನಿರ್ಮಿಸಿದನು. ನಿರೂಪಣೆ, ಭಾಷೆ ಮತ್ತು ಆಂತರಿಕ ದೃಷ್ಟಿಕೋನಗಳನ್ನು ಅತನ ನಿಕಟ, ಅಮೂರ್ತ ಸಂಕೇತಗಳಿಂದ ಹೊರಹೊಮ್ಮಲು ಅವಕಾಶ ಮಾಡಿಕೊಟ್ಟಿವೆ ಎಂದು ಕಲಾವಿಮರ್ಶಕರು ಬರೆಯುತ್ತಾರೆ. (ಅಂದಹಾಗೆ Cy ಅಂದರೆ ಮಹಾನ್, ಜಗದ್ಗುರು ಅನ್ನುವ ಅಂತ ಅರ್ಥವಿದೆ)



