logo

ಕಲಾ
ಕರ್ನಾಟಕ

www.kalakarnataka.com

ಸುವಿಚಾರ
ಬುದ್ಧನಾದ ; ಬದ್ಧನಾದ..????ಸಿದ್ಧನಾದ ಸಿದ್ಧಾರ್ಥ ತನ್ನ ಸಿದ್ಧಾಂತ ಸಾಧನೆಗೆ , ಸತ್ಯದ ಪಥದತ್ತ ಸಾಗಲು ಶಪಥಗೈದ, ಆಶೆಗಳ ಮೆಟ್ಟಿ ಗಟ್ಟಿ ಮನದಿ ತೆರೆದ ಹೊಸ ಮನ್ವಂತರದ ಕಾರುಣ್ಯದ ಶಾಂತಿ ಬಾಗಿಲು. ಬದುಕಿನ ನಿಜ ಸಾರ ತಿಳಿದೆದ್ದ , ಬುದ್ಧನಾದ, ಬದ್ಧನಾದ.. ...ಶಿ.ಗು.ಕುಸುಗಲ್ಲ
- - ಶಿ.ಗು.ಕುಸುಗಲ್ಲ

ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಸಪ್ಟೆಂಬರ್ 10 ರಿಂದ 16-2024 ರವರೆಗೆ 'ಕಲರಾ೯ಗ್ ' ಏಕವ್ಯಕ್ತಿ ಕಲಾಪ್ರದರ್ಶನ

ಕಲಾಸುದ್ದಿ
Published By: Kala Karanataka
Last Updated Date:  05-Sep-2024
ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಸಪ್ಟೆಂಬರ್ 10 ರಿಂದ 16-2024 ರವರೆಗೆ 'ಕಲರಾ೯ಗ್ ' ಏಕವ್ಯಕ್ತಿ ಕಲಾಪ್ರದರ್ಶನ


"ಕಾವ್ಯಾತ್ಮಕ ಅಭಿವ್ಯಕ್ತಿ"--   'ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಬಣ್ಣಗಳನ್ನು ಬಳಸಿ ವರ್ಣಚಿತ್ರ ರಚಿಸುವ ಕಲಾವಿದ ಉತ್ತಮನು'ಎಂಬುದು ಪಾಶ್ಚಾತ್ಯ ರಮ್ಯ ಕಲಾವಿದ ಟರ್ನರ್ ಎಂಬುವನ ನುಡಿ.
    ಮುಂಬೈನ ಪ್ರತಿಷ್ಠಿತ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಇದೇ ಸಪ್ಟೆಂಬರ್ 10 ರಿಂದಸೆಪ್ಟೆಂಬರ್ 16-2024 ರವರೆಗೆ 'ಕಲರಾ೯ಗ್ ' ಶೀರ್ಷಿಕೆ ಯಡಿ ತಮ್ಮ ವರ್ಣಚಿತ್ರಗಳನ್ನು ಪ್ರದರ್ಶಿಸಲಿರುವ ಮಂಗಳೂರಿನ ಪವನ್ ಕುಮಾರ್ ಅತ್ತಾವರ್ ರವರ ಏಕವ್ಯಕ್ತಿ ಕಲಾಪ್ರದರ್ಶನ ದಲ್ಲಿ ಪ್ರದರ್ಶನಗೊಳ್ಳಲಿರುವ ಕಲಾಕೃತಿಗಳು ಟರ್ನರ್ ನ ಈ ಮೇಲಿನ ನುಡಿಗಳನ್ನು ದೃಢೀಕರಿಸುವಂತಿವೆ.

   ಆಯೋಜಿಸಲಿರುವ ಕಲಾಪ್ರದರ್ಶನದಲ್ಲಿನ ಬಹುತೇಕ ಕಲಾಕೃತಿಗಳು ಕೆಂಪು-ಕಪ್ಪು, ಕೆಂಪು; ನೀಲಿ ಬಣ್ಣಗಳನ್ನೇ ಪ್ರಧಾನವಾಗಿ ಹೊಂದಿದ್ದು ಸಂಗೀತ ಕಛೇರಿಗಳಲ್ಲಿನ ವಾದ್ಯ ಪರಿಕರಗಳನ್ನು ಅಭಿವ್ಯಕ್ತಿಯ ವಸ್ತು ವಿಷಯಗಳಾಗಿ ಹೊಂದಿವೆ.ಕೆಲವೇ ಬಣ್ಣಗಳಲ್ಲಿ  ಕಲಾವಿದರು ಸಂಗೀತ ಉಪಕರಣಗಳಲ್ಲಿ ಎತ್ತು ,ವೀಣೆ ,ಮಾನವ ಹಸ್ತ ,ಹೆಣ್ಣಿನ ರೂಪ ಮೊದಲಾದ ಜೈವಿಕ, ಅಜೈವಿಕ ಆಕೃತಿಗಳನ್ನು ಆವಾಹಿಸಿ ಕ್ಯಾನವಾಸ್ ಎಂಬ ಅವಕಾಶದಲ್ಲಿ ಸರ್ರಿಯಲ್ ನೆಲೆಯಲ್ಲಿ ಕಲಾತ್ಮಕ ಸೊಬಗನ್ನು ಸಮ್ಮಿಳನಗೊಳಿಸಿ ರಚಿಸಿರುವುದು ವಿಶೇಷ.ಚಿತ್ರಗಳಲ್ಲಿ ಪ್ರಧಾನ ವಿಷಯವನ್ನು ಸೆಂಟ್ರಲ್ ಫೋಕಸ್ ಮಾಡಿ ಉಳಿದ ಅವಕಾಶಗಳನ್ನು ಖಾಲಿ ಇರಿಸಿ ವೀಕ್ಷಕರ ಕಣ್ ನೋಟ ಸರಕ್ಕನೆ ಅಲ್ಲಿನ ಮುಖ್ಯ ನಿರೂಪಣೆಯತ್ತ ಹರಿಯುವಂತೆ ಮಾಡಿರುವುದು ಇವರ ವೈಯಕ್ತಿಕ ಶೈಲಿಯ ಲಕ್ಷಣವಾಗಿಯೂ ಮತ್ತು ಇವರದೇ ಆದ ಕಲಾತಂತ್ರಗಾರಿಕೆಯಾಗಿಯೂ ಪರಿಗಣನೀಯವಾಗತಕ್ಕ ಅಂಶಗಳು.  ಆಕೃತಿಗಳ ಅಂಚಿನಲ್ಲಿ ಗಾಢ,ಮಧ್ಯಮ, ಮಂದ ವರ್ಣ  ಛಾಯಾಕರಣ ಸೃಷ್ಟಿಸಿ ರುವುದು ಆಕೃತಿಗಳು ಕ್ಯಾನವಾಸ್ ಎಂಬ ಅವಕಾಶ ದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತವೆ.ನೈಜಶೈಲಿನಿಷ್ಠ ಆಕೃತಿಗಳು ಅಲ್ಲಲ್ಲಿ ಕನಸಿನಲ್ಲಿ ಮಾತ್ರ ಗೋಚರವಾಗಬಹುದಾದ , ವಾಸ್ತವಾತೀತವಾದ 'ವಿಕೃತಿ'ಯಿಂದೊಡಗೂಡಿ ಪ್ರಸ್ತುತಿಗೊಂಡಿರುವುದು ವೀಕ್ಷಕರಿಗೆ ಅಚ್ಚರಿಯ ನೋಟ ಒದಗಿಸುವ ಸಾಧ್ಯತೆಗಳಿವೆ.

     ಸಂಗೀತ ಕಛೇರಿಗಳಿಂದ ಪ್ರಭಾವಿತರಾಗಿ ರಚಿಸಿರುವ ಕಲಾಕೃತಿಗಳು ಕಲಾವಿದರ ಮನೋವಲಯದಲ್ಲಿ ಉಂಟಾದ ಭಾವಸಂದೋಹದ ಪ್ರತಿಧ್ವನಿಗಳೆಂಬುದನ್ನು ಸಂಗೀತಜ್ಞ ನೋಡುಗರು ಲಕ್ಷ್ಯದಲ್ಲಿರಿಸಿಕೊಂಡು ನೋಡುವುದು ವಿಹಿತ(ಇಲ್ಲವಾದರೆ ಸಂಗೀತಜ್ಞ ನೋಡುಗರಿಗೂ ಕಲಾಕೃತಿ ರಚಿಸಿದ ಕಲಾವಿದರಿಗೂ ಭಿನ್ನಾಭಿಪ್ರಾಯ ಮೂಡಬಹುದಾದ ಸಾಧ್ಯತೆಯೂ ಇಲ್ಲದಿಲ್ಲ ಎಂಬುದನ್ನು ಅನುಲಕ್ಷ್ಯಿಸಿ ಈ ಸಲಹೆ).ಹಮ್ಮಿಕೊಂಡಿರುವ ಪ್ರದರ್ಶನದಲ್ಲಿ ಇವರ 21ಕಲಾಕೃತಿಗಳು ಇರಲಿದ್ದು, ಆಕೃಲಿಕ್ ಆನ್ ಕ್ಯಾನವಾಸ್ ಮಾಧ್ಯಮದಲ್ಲಿ ರಚಿತವಾದವುಗಳು.ಬಹುತೇಕ ಕೃತಿಗಳು 30ಇಂಚು×24ಇಂಚು ಅಳತೆಯವು, ಕೆಲವು 36×24ಇಂಚು ಅಳತೆಯವು.

     ದಾವಣಗೆರೆಯ ಲಲಿತಕಲಾ ಮಹಾವಿದ್ಯಾಲಯದಲ್ಲಿ(ಈಗಿನ ದೃಶ್ಯ ಕಲಾ ಮಹಾವಿದ್ಯಾಲಯ ದಾವಣಗೆರೆ) ಚಿತ್ರ ಕಲಾ ಪದವಿ ಅಭ್ಯಸಿಸಿ ಪುಣೆಯಲ್ಲಿ ಅಡ್ವಾನ್ಸ್ಡ್ ಕಂಪ್ಯೂಟರ್ ಡಿಪ್ಲೊಮಾ ಕೋರ್ಸ್ ಮುಗಿಸಿರುವ ಪವನ್ ಕುಮಾರ್ ಅತ್ತಾವರ್ ರವರ ತಂದೆ ದಿ.ಓಂಪ್ರಕಾಶ್ ರವರೂ ಸಹ ಒಳ್ಳೆಯ ಚಿತ್ರಕಾರರೇ ಆಗಿದ್ದರಿಂದ ಚಿತ್ರ ಕಲೆ ಇವರಿಗೆ ತಂದೆಯಿಂದ ಬಳುವಳಿಯಾಗಿ ಬಂದುದೆನ್ನಲಡ್ಡಿಯಿಲ್ಲ.

    ಸದ್ಯ ಮಣಿಪಾಲದ ಕಂಪನಿಯೊಂದರಲ್ಲಿ ಕಲಾವಿದರಾಗಿ /ವಿನ್ಯಾಸಕಾರರಾಗಿ ವೃತ್ತಿನಿರತರಾಗಿರುವ ಪವನ್ ಕುಮಾರ್ ಅತ್ತಾವರ್ ರಿಗೆ 45ರ ಹರೆಯ.ದೇಶದ ಎಲ್ಲ ಕ್ರಿಯಾಶೀಲ ಕಲಾವಿದರುಗಳ ಕನಸು 'ಜೀವನದಲ್ಲಿ ಒಮ್ಮೆಯಾದರೂ ಮುಂಬೈನಲ್ಲಿರುವ ಪ್ರಸಿದ್ಧ 'ಜಹಾಂಗೀರ್ ಆರ್ಟ್ ಗ್ಯಾಲರಿ'ಯಲ್ಲಿ  ಕಲಾಕೃತಿಗಳನ್ನು ಪ್ರದರ್ಶಿಸಬೇಕು'ಎಂಬುದಾಗಿರುತ್ತದೆ.ಏಕೆಂದರೆ ಆ ಗ್ಯಾಲರಿಯಲ್ಲಿ ಹೋಗಿ ಕೇಳಿಕೊಂಡವರಿಗೆಲ್ಲ ಒಪ್ಪಿಗೆ ಕೊಡುವುದಿಲ್ಲ. ಅಲ್ಲಿ ಕಲಾಪ್ರದರ್ಶನ ಮಾಡಬಯಸುವ ಕಲಾವಿದ/ದೆ ತಮ್ಮ ಪರಿಚಯ,ಸಾಧನೆ, ಕಲಾಕೃತಿಗಳ ಒಳ್ಳೆಯ ಪೋಟೋ ಲಗತ್ತಿಸಿ ಅರ್ಜಿ ಹಾಕಿಕೊಳ್ಳಬೇಕು. ಅದು ಅಲ್ಲಿನ ಆಯ್ಕೆ ಸಮಿತಿಗೆ ಒಪ್ಪಿತವಾದರೆ ಅವರು ಆ ಕುರಿತು ಅಧಿಕೃತವಾಗಿ ತಿಳಿಸುತ್ತಾರೆ. ಅಷ್ಟಾದರೂ ಆರೆಂಟು ವರ್ಷಗಳ ಕಾಲ ಆ ಕಲಾವಿದ/ದೆ ಅಲ್ಲಿ ಪ್ರದರ್ಶನಕ್ಕೆ  ಕಾಯಬೇಕಾಗುತ್ತದೆ. ಪವನ್ ಕುಮಾರ್ ರವರೂ ಕೂಡಾ ಅರ್ಜಿ ಹಾಕಿ, ಒಪ್ಪಿಗೆ ಪಡೆದಿದ್ದು ಸುಮಾರು ಎಂಟು ವರ್ಷಗಳ ಹಿಂದೆ.ಆದರೆ ಇದೀಗ ಅವರ ಸರದಿ ಬಂದಿದೆ ಎಂಬುದು ಕರಾವಳಿ ದೃಶ್ಯ ಕಲಾ ವಲಯಕ್ಕೆ, ಅಷ್ಟೇ ಅಲ್ಲ ಕನ್ನಡ ನಾಡಿನ ದೃಶ್ಯ ಕಲಾ ರಂಗಕ್ಕೆ ಹೆಮ್ಮೆಯ ಸಂಗತಿ.
      ರಮೇಶ ರಾವ್, ಭಾಸ್ಕರರಾವ್ ರಂತಹ ಹಿರಿಯ ದೃಶ್ಯ ಕಲಾವಿದರಿರುವ 'ಆರ್ಟಿಸ್ಟ್ಸ್ ಪೋರಂ ಉಡುಪಿ' ಎಂಬ ಕಲಾ ಬಳಗದ ಸಕ್ರೀಯ ಸದಸ್ಯರಾಗಿ ಆ ಬಳಗದ ಅನೇಕ ಕಲಾಪ್ರದರ್ಶನಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಉಡುಪಿ-ಮಂಗಳೂರು ಭಾಗದ ದೃಶ್ಯ ಕಲಾ ಕ್ಷೇತ್ರದಲ್ಲಿ ಭರವಸೆಯ ದೃಶ್ಯ ಕಲಾವಿದರಾಗಿ ಗಮನಸೆಳೆದಿರುವ ಪವನ್ ಕುಮಾರ್ ಅತ್ತಾವರ್ ಇದೇ ಹಾದಿಯಲ್ಲಿ ಉತ್ಸಾಹದಿಂದ ಸಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿ ಎಂಬುದಾಗಿ ಹಾರೈಕೆ.

 --   ಲೇಖನ--ದತ್ತಾತ್ರೇಯ ಎನ್. ಭಟ್ಟ,  ಕಲಾವಿಮರ್ಶಕ ಮೊ-8867058905, ಮೇಲ್-dnbhat92@gmail.com


kkkkkk

kkkkkk

kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img