logo

ಕಲಾ
ಕರ್ನಾಟಕ

www.kalakarnataka.com

ಸುವಿಚಾರ
ಬುದ್ಧನಾದ ; ಬದ್ಧನಾದ..????ಸಿದ್ಧನಾದ ಸಿದ್ಧಾರ್ಥ ತನ್ನ ಸಿದ್ಧಾಂತ ಸಾಧನೆಗೆ , ಸತ್ಯದ ಪಥದತ್ತ ಸಾಗಲು ಶಪಥಗೈದ, ಆಶೆಗಳ ಮೆಟ್ಟಿ ಗಟ್ಟಿ ಮನದಿ ತೆರೆದ ಹೊಸ ಮನ್ವಂತರದ ಕಾರುಣ್ಯದ ಶಾಂತಿ ಬಾಗಿಲು. ಬದುಕಿನ ನಿಜ ಸಾರ ತಿಳಿದೆದ್ದ , ಬುದ್ಧನಾದ, ಬದ್ಧನಾದ.. ...ಶಿ.ಗು.ಕುಸುಗಲ್ಲ
- - ಶಿ.ಗು.ಕುಸುಗಲ್ಲ

ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಸಪ್ಟೆಂಬರ್ 10 ರಿಂದ 16-2024 ರವರೆಗೆ 'ಕಲರಾ೯ಗ್ ' ಏಕವ್ಯಕ್ತಿ ಕಲಾಪ್ರದರ್ಶನ

ಕಲಾಸುದ್ದಿ
Published By: Kala Karanataka
Last Updated Date:  02-Jul-2024
| ಮುದ್ರಣ ಕಲೆಯಲ್ಲಿ ಶೇಖ್ ಕವಿ ಸಾಲು | • ಅಪರೂಪದ ಕಲಾಕೃತಿಗಳ ಪ್ರದರ್ಶನ • ಗ್ಯಾಲರಿ ಸುಮುಖ (Gallery Sumukha)ದಲ್ಲಿ ಆರಂಭವಾಗಿದೆ.

| ಮುದ್ರಣ ಕಲೆಯಲ್ಲಿ ಶೇಖ್ ಕವಿ ಸಾಲು | • ಅಪರೂಪದ ಕಲಾಕೃತಿಗಳ ಪ್ರದರ್ಶನ  • ಸುಮುಖದಲ್ಲಿ retrospective show,  ಕವಿ, ದೃಶ್ಯ ಕಲಾವಿದ. ಶಿಕ್ಷಕ, ಕಲಾವಿಮರ್ಶಕರೂ ಹೌದು. ಕಲಾ ಕ್ಷೇತ್ರದಲ್ಲಿ ಮಾಡಿರುವ ಅಪಾರ ಸಾಧನೆಗಾಗಿ 1983 ರಲ್ಲಿ ಪದ್ಮಶ್ರೀ ಮತ್ತು 2014 ರಲ್ಲಿ ಪದ್ಮಭೂಷಣ ಪ್ರಶಸ್ತಿ ಇವರ ಮುಡಿಗೇರಿದೆ!  ಇವರಿಗೆ ಈಗ 87 ವರ್ಷ. ಭಾರತದ ಖ್ಯಾತನಾಮರಲ್ಲಿ ಇವರೂ ಒಬ್ಬರು. ಅವರು, ಗುಲಾಮ್ ಮೊಹಮ್ಮದ್ ಶೇಖ್ (Ghulam Mohammed Sheikh). ಗುಜರಾತ್ ಮೂಲದ ಕಲಾವಿದರು. ಇವರ ಮುದ್ರಣ (printmaking) ಕಲಾಕೃತಿಗಳ Retrospective ಪ್ರದರ್ಶನ ಬೆಂಗಳೂರಿನ ಪ್ರತಿಷ್ಠಿತ ಗ್ಯಾಲರಿ ಸುಮುಖ (Gallery Sumukha)ದಲ್ಲಿ ಆರಂಭವಾಗಿದೆ. ಕರ್ನಾಟಕದ ಹಿರಿಯ ಕಲಾವಿದೆ ಪುಷ್ಪಮಾಲಾ ಎನ್. (Pushpamala N.) ಅವರು ಈ ಕಲಾಪ್ರದರ್ಶನ ಕ್ಯುರೇಟ್ ಮಾಡಿದ್ದಾರೆ. ಶ್ರೀಯುತ ಶೇಖ್ ಅವರ ಜೀವಿತಾವಧಿಯಲ್ಲಿ ದಕ್ಷಿಣ ಭಾರತದಲ್ಲಿ ನಡೆದ ಅವರ ಪ್ರಮುಖ, ಅತ್ಯಂತ ಮಹತ್ವದ ಕಲಾ ಪ್ರದರ್ಶನ ಇದಾಗಿದೆ ಎನ್ನುವುದನ್ನು curatorial ಬರಹದಲ್ಲಿ ದಾಖಲಿಸಿದ್ದಾರೆ. ಪ್ರದರ್ಶನ ಎರಡು ಹಂತದಲ್ಲಿ ನಡೆಯುವುದಾಗಿಯೂ ಹೇಳಿದ್ದಾರೆ. 

| ಬರಹ ಮತ್ತು ಕಲೆಯ ಆಳ ಅಗಾಧ |ಚಿತ್ರಕಲಾವಿದರಾದರೂ, 1950ರ ದಶಕದಲ್ಲಿ ಗುಜರಾತಿ ವಾರ ಪತ್ರಿಕೆ ಸೇರಿದಂತೆ ಇನ್ನೂ ಕೆಲ ಪತ್ರಿಕೆಗಳ ಜೊತೆ ಗುರುತಿಸಿಕೊಂಡಿದ್ದ ಜಿ.ಎಂ.ಶೇಖ್ ಅವರು ತಮ್ಮ ಬರವಣಿಗೆಯ ಮೂಲಕ ಸಾಹಿತ್ಯ ವಲಯಕ್ಕೂ ಹತ್ತಿರದವರಾಗಿದ್ದರು. ಇದೇ ಕಾರಣಕ್ಕಾಗಿಯೋ ಏನೊ ಅವರು ಕವಿಯಾಗಿಯೂ, ಚಿತ್ರ ಕಲಾವಿದರಾಗಿಯೂ ಮತ್ತು ಕಲಾವಿಮರ್ಶಕರಾಗಿಯೂ ಖ್ಯಾತರೆನಿಸಿದ್ದಾರೆ. ಜಿ.ಎಂ.ಶೇಖ್ ಅವರ ಮುದ್ರಣ ಕಲೆಯಲ್ಲಿನ ಅನುಭವ, ಕಲಾಕೃತಿಗಳಲ್ಲಿನ ಗಟ್ಟಿತನ ಈ ಪ್ರದರ್ಶನದಲ್ಲಿ ಅನಾವರಣ ಆಗಿದೆ. 1950-60ರ ದಶಕದಲ್ಲಿ ರಚಿತ ಲಿನೋಕಟ್, ವುಡ್ ಕಟ್, ಲಿಥೋ, ಇಂಟಾಗ್ಲಿಯೋ ಮತ್ತು ಸೆರಿಗ್ರಫಿ ಮುದ್ರಣ ಕೃತಿಗಳಿಂದ ಹಿಡಿದು ಇತ್ತೀಚಿನ ಅನ್ವೇಷಿತ ಮುದ್ರಣ ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ. 

ಕೇವಲ ಒಂದು ಶೈಲಿಗೆ ಅಂಟಿಕೊಳ್ಳದೆ ಆಯಾ ಕಾಲಘಟ್ಟಗಳಲ್ಲಿ ಪ್ರಯೋಗಶೀಲ ಮತ್ತು ಕ್ರಿಯಾಶೀಲ ಕಲಾಕೃತಿಗಳನ್ನು ರಚಿಸಿರುವುದು ಈ ಪ್ರದರ್ಶನದಿಂದ ಕಂಡುಕೊಳ್ಳಲು ಸಾಧ್ಯವಾಗಲಿದೆ. 1957ರಲ್ಲಿ ರಚಿಸಿದ 'Still life' ವುಡ್ ಕಟ್, 'River' ಶೀರ್ಷಿಕೆಯ ಲಿನೋ ಮುದ್ರಣ ಕಲಾಕೃತಿ, 'Figure with Still life' ಮತ್ತು 'Figures and Still life' ಶೀರ್ಷಿಕೆಯ ಲಿನೋ ಮುದ್ರಣ ಕಲಾಕೃತಿಗಳ ನಿರ್ವಹಣೆ ಹೊಸ ಅನುಭವ ನೀಡುತ್ತವೆ. ಆ ಕಾಲದಲ್ಲೇ ಬಹುವರ್ಣ ಕಲಾಕೃತಿಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಅವರ ಬದ್ಧತೆಗೆ ಹಿಡಿಯಬಹುದಾದ ಕೈಗನ್ನಡಿ. 1963ರಲ್ಲಿ ರಚಿಸಿದ 'Women Carrying Firewood' ಶೀರ್ಷಿಕೆಯ ಲಿಥೋ ಮುದ್ರಣ ಕಲಾಕೃತಿಯ ಶೈಲಿಯೇ ಬೇರೆಯಾಗಿ ನಿಲ್ಲುವಂತಿವೆ. ಗ್ರಾಮೀಣ ಮಹಿಳೆಯರ ಬದುಕು ಪ್ರತಿಬಿಂಬಿಸುವ, ವಿಭಿನ್ನ ಸಂಯೋಜನೆಯ (composition) ಕಲಾಕೃತಿ ಇದಾಗಿದೆ. ಲಿಥೋ ಮಾಧ್ಯಮದಲ್ಲಿಯೇ ರಚಿಸಿರುವ ಅಮೂರ್ತ ಸರಣಿ (abstract) ಕಲಾಕೃತಿಗಳು ಇಡೀ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿಯೇ ಕಾಣಿಸುತ್ತವೆ. ಕಾರಣ ಗಾಢವಾದ ವರ್ಣ ಸಂಯೋಜನೆ ಮತ್ತು ಕಲಾಕೃತಿಯೊಳಗಿನ ನಿಗೂಢ ಭಾವ ನೋಡುಗರನ್ನು ಹಿಡಿದು ನಿಲ್ಲಿಸುತ್ತವೆ. ಈ ಎಲ್ಲ ಕಲಾಕೃತಿಗಳಲ್ಲಿನ ತಂತ್ರಗಾರಿಕೆ (techniques) ಮತ್ತು ವರ್ಣ ಬಳಕೆಯೊಳಗಿನ ತೀವ್ರತೆ (intensity) ವರ್ಣಿಸಲಸದಳ.  ಇನ್ನು ಎಚ್ಚಿಂಗ್ ಮತ್ತು ಸೆರಿಗ್ರಫಿ ಕಲಾಕೃತಿಗಳು ಜಿ.ಎಂ.ಶೇಖ್ ಅವರ ಬದ್ಧತೆ, ತಾಳ್ಮೆ ಪ್ರತಿಬಿಂಬಿಸುವ ಇನ್ನೊಂದು ಪ್ರಕಾರದ ಕಲಾಕೃತಿಗಳು. ಈ ಎರಡೂ ಮುದ್ರಣ ಪ್ರಕಾರಗಳು ಅಷ್ಟು ಸುಲಭವಾಗಿ ಒಲಿಯುವಂತದ್ದಲ್ಲ. ಒಂದೊಮ್ಮೆ ಒಲಿದರೂ ನಿರಂತರವಾಗಿ ಕಲಾಕೃತಿಗಳನ್ನು ರಚಿಸುವವರು ಬಹಳ ವಿರಳ. ಪ್ರದರ್ಶಿಸಲ್ಪಟ್ಟ ಎಚ್ಚಿಂಗ್ ಮತ್ತು ಸೆರಿಗ್ರಫಿ ಕಲಾಕೃತಿಗಳಲ್ಲಿ ಅವರ ವರ್ಣಚಿತ್ರಗಳಲ್ಲಿನ ಅನೆಕ ಅಂಶಗಳನ್ನು (elements) ಕಾಣಲುಸಾಧ್ಯ. ಹೆಚ್ಚಿನ ಕಲಾಕೃತಿಗಳ ಸಂಯೋಜನಾ ವಿಧಾನದಲ್ಲಿಯೂ ವರ್ಣಚಿತ್ರಗಳಲ್ಲಿನ ಸಾಮ್ಯತೆ ಗ್ರಹಿಸಬಹುದು.

ಸ್ನೇಹಿತರೆ, ಗುಲಾಮ್ ಮೊಹಮ್ಮದ್ ಶೇಖ್ ಅವರ ಜೀವನ್ಮಾನ ಕಲಾಸಾಧನೆಯ ಮುದ್ರಣ ಕಲಾಕೃತಿಗಳ ಕಲಾಪ್ರದರ್ಶನ ಜುಲೈ 27ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ. ಕಲಾಕ್ಷೇತ್ರದ ವಿಭಿನ್ನ ಸ್ಥರಗಳಲ್ಲಿ ಕಾರ್ಯನಿರ್ವಹಿಸುವ ಕನಸುಕಾಣುತ್ತಿರುವ ಯುವ ಕಲಾವಿದರು ನೋಡಲೇಬೇಕಾದ ಕಲಾಪ್ರದರ್ಶನ ಇದಾಗಿದೆ. 

Couytesy : ®agniprapancha, #GulammohammedSheikh #sumukhagallery #gallerysumukha #RetrospectiveShow #bengaluruartgallery #artkarnataka #karnatakaart #ಅಗ್ನಿಪ್ರಪಂಚ #agniprapancha #karnatakaartgallery


kkkkkk

kkkkkk

kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img