logo

ಕಲಾ
ಕರ್ನಾಟಕ

www.kalakarnataka.com

ಸುವಿಚಾರ
ಬುದ್ಧನಾದ ; ಬದ್ಧನಾದ..????ಸಿದ್ಧನಾದ ಸಿದ್ಧಾರ್ಥ ತನ್ನ ಸಿದ್ಧಾಂತ ಸಾಧನೆಗೆ , ಸತ್ಯದ ಪಥದತ್ತ ಸಾಗಲು ಶಪಥಗೈದ, ಆಶೆಗಳ ಮೆಟ್ಟಿ ಗಟ್ಟಿ ಮನದಿ ತೆರೆದ ಹೊಸ ಮನ್ವಂತರದ ಕಾರುಣ್ಯದ ಶಾಂತಿ ಬಾಗಿಲು. ಬದುಕಿನ ನಿಜ ಸಾರ ತಿಳಿದೆದ್ದ , ಬುದ್ಧನಾದ, ಬದ್ಧನಾದ.. ...ಶಿ.ಗು.ಕುಸುಗಲ್ಲ
- - ಶಿ.ಗು.ಕುಸುಗಲ್ಲ

ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಸಪ್ಟೆಂಬರ್ 10 ರಿಂದ 16-2024 ರವರೆಗೆ 'ಕಲರಾ೯ಗ್ ' ಏಕವ್ಯಕ್ತಿ ಕಲಾಪ್ರದರ್ಶನ

Advanced Search

ದಿ.ಶ್ರೀ.ಗಜಾನನ ಮಹಾಲೆ ಅವರ ದತ್ತಿ ಕಾರ್ಯಕ್ರಮ- ರಂಗಸಂಪದ ಬೆಳಗಾವಿಯ ಯಶಸ್ವಿ ನಾಟಕ

ನಿನ್ನೆ 21-1-2023ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ದಿ.ಶ್ರೀ.ಗಜಾನನ ಮಹಾಲೆ ಅವರ ದತ್ತಿ ಕಾರ್ಯಕ್ರಮದ ನಿಮಿತ್ತ ನಮ್ಮ ರಂಗಸಂಪದ ಬೆಳಗಾವಿಯ ಯಶಸ್ವಿ ನಾಟಕ

Apr 05, 2021 at 9:48 am

"ಲಿಂಗ-ಸೂಕ್ಷ್ಮ ಹಾಸ್ಯಕ್ಕಾಗಿ ಎದ್ದುನಿಂತ ಭಾರತೀಯ ರಂಗಭೂಮಿ"
ಹೆಸರಾಂತ ಚರ್ಮರೋಗ ತಜ್ಞ ಅನಿಲ್ ಅಬ್ರಹಾಂ ಅವರ ಸ್ಟ್ಯಾಂಡ್-ಅಪ್ ಕಾಮಿಕ್ ಅವರ ಪ್ರಸಿದ್ಧ ನಾಟಕ ಜಂಟಲ್‌ಮೆನ್‌ನಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರದರ್ಶಿಸಲಾಯಿತು. "ಪುರುಷರ ಗೀಳಿನ ಮೇಲೆ ಉಲ್ಲಾಸಕರವಾಗಿ ತಮ್ಮ ಭ್ರಮೆಗಳನ್ನು ತೆಗೆದುಕೊಳ್ಳುತ್ತದೆ" ಎಂದು ವಿವರಿಸಲಾಗಿದೆ, ಈ ನಾಟಕವು ಮೂಲತಃ ವಿಭಿನ್ನ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷರ ಸ್ವಗತವಾಗಿದೆ.


ಮೊದಲನೆಯದು ಮಲಯಾಳಿ ಟೆಕ್ಕಿಯಾಗಿದ್ದು, ಅವರು ಕಾರ್ಯಕ್ಷಮತೆಯ ಆತಂಕದಿಂದ ಬಳಲುತ್ತಿದ್ದಾರೆ. ಅವನು ಮದುವೆಗೆ ಬಲವಂತವಾಗಿದ್ದಾಗ, ಅವನು ಅದಕ್ಕೆ 'ಅಪ್' ಅಲ್ಲ ಎಂದು ಹೇಳಲು ಪ್ರಯತ್ನಿಸುತ್ತಾನೆ. "ಅಕ್ಷರಶಃ ಮತ್ತು ಸಾಂಕೇತಿಕವಾಗಿ," ಅವರು ಸೇರಿಸುತ್ತಾರೆ. ಮತ್ತು DJ ತನ್ನ ಮದುವೆಯಲ್ಲಿ ಯಾವ ಹಾಡನ್ನು ನುಡಿಸುತ್ತಾನೆ? ಅದ್ನಾನ್ ಸಾಮಿಯ ನಿತ್ಯಹರಿದ್ವರ್ಣ ಮುಜ್ಕೋ ಭೀ ತೋ ಲಿಫ್ಟ್ ಕರ ದೇ! ಸಭಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು. ಶಿವಾಜಿನಗರದ ಕ್ಷೌರಿಕರೊಬ್ಬರು ಗರ್ಭನಿರೋಧಕದ ಬಗ್ಗೆ ತಮ್ಮ ಪ್ರಾಮಾಣಿಕ ಆಲೋಚನೆಗಳನ್ನು ಒಪ್ಪಿಕೊಂಡಾಗ ಅವರು ಹೆಚ್ಚು ವ್ಯಂಗ್ಯದಿಂದ ಬಡಿಸಿದರು.



ಅನುವಾದವು ಅಧಿಕೃತತೆಯನ್ನು ಕೊಲ್ಲುತ್ತದೆ ಆದರೆ ನಾನು ಪ್ರಯತ್ನಿಸುತ್ತೇನೆ. ಬೆಂಗಳೂರು ಉರ್ದುವಿನಲ್ಲಿ, "ಬಾರಿಶ್ ಮೇ ಛತ್ರಿ ತೀಕ್ ಹೈ ಸಾಹೇಬ್ ಮಗರ್ ಮೊಹಬ್ಬತ್ ಮೇ ಕಾಂಡೋಮ್ ಜಮ್ತಾ ನಹೀ" (ಮಳೆ ಬಂದಾಗ ಕೊಡೆ ಹಿಡಿದರೂ ಪರವಾಗಿಲ್ಲ ಸರ್, ಆದರೆ ಕಾಂಡೋಮ್‌ಗೆ ಪ್ರೀತಿಯಲ್ಲಿ ಸ್ಥಾನವಿಲ್ಲ) ಎಂದು ಹೇಳುತ್ತಾರೆ.
ಕಾಂಡೋಮ್‌ಗಳ ಬಗೆಗಿನ ತನ್ನ ದ್ವೇಷವನ್ನು ಮತ್ತಷ್ಟು ವ್ಯಕ್ತಪಡಿಸುತ್ತಾ, ಅವನು ನಗುತ್ತಿರುವ ಗುಂಪನ್ನು ಕೇಳುತ್ತಾನೆ, "ಇಬ್ಬರು ಚುಂಬಿಸಲು ಪ್ರಯತ್ನಿಸುತ್ತಿರುವಾಗ ತುಟಿಗಳ ನಡುವೆ ಪ್ಲಾಸ್ಟಿಕ್ ತುಂಡು ಇದ್ದರೆ ಅದು ಎಷ್ಟು ವಿಚಿತ್ರವಾಗಿ ಕಾಣುತ್ತದೆ?"......

-Vivek M V,

Courtesy :Deccan Herald

Apr 05, 2021 at 9:48 am

ಕನ್ನಡ ಚಿತ್ರರಂಗದ ಅಗ್ರಪಂಕ್ತಿಯ ಚಿತ್ರ ನಿರ್ದೇಶಕ - " ಪುಟ್ಟಣ್ಣ ಕಣಗಾಲ್‌ "
ವಿಜಯನಾರಸಿಂಹ ಕನ್ನಡದ ಮರೆಯಲಾಗದ ಚಿತ್ರ ಸಾಹಿತಿಗಳ ಆಗ್ರಪಂಕ್ತಿಯಲ್ಲಿ ಚಿರವಿರಾಜಿತರು. ಪುಟ್ಟಣ್ಣ ಕಣಗಾಲ್‌,  ಸಿದ್ಧಲಿಂಗಯ್ಯ ಮುಂತಾದ ಕನ್ನಡ ಚಿತ್ರರಂಗದ ಅಗ್ರಪಂಕ್ತಿಯ ಚಿತ್ರ ನಿರ್ದೇಶಕರ ಅವಿಸ್ಮರಣೀಯ ಚಿತ್ರಗಳಿಗೆ ತಮ್ಮ ಚಿತ್ರಗೀತೆಗಳ ಮೂಲಕ ಶೋಭೆ ತಂದವರು ವಿಜಯನಾರಸಿಂಹ. 
ವಿಜಯನಾರಸಿಂಹ 1927ರ ಜನವರಿ 16ರಂದು ಜನಿಸಿದರು. ವಿಜಯನಾರಸಿಂಹ ಮಂಡ್ಯ ಜಿಲ್ಲೆ, ಮೇಲುಕೋಟೆ ಸಮೀಪದ ಹಳೇಬೀಡು ಎಂಬ ಹಳ್ಳಿಯವರು. ಚಿಕ್ಕಂದಿನಿಂದಲೇ ನಾಟಕ, ಕಾದಂಬರಿ ಬರೆವ ಗೀಳು ಅಂಟಿಸಿಕೊಂಡ ವಿಜಯನಾರಸಿಂಹ, ಸಾಹಿತ್ಯ ಕ್ಷೇತ್ರದ ದಿಗ್ಗಜರಾಗಿದ್ದ ಪು.ತಿ.ನ,  ಗೋಪಾಲಕೃಷ್ಣ ಅಡಿಗರಂಥ ಸಾಹಿತಿಗಳ ನಿಕಟವರ್ತಿಯಾಗಿದ್ದವರು. ಕೆಲವು ಕಾಲ ಪತ್ರಕರ್ತರಾಗಿಯೂ ದುಡಿದರು.
1953ರಲ್ಲಿ ಜಿ. ಕೆ. ವೆಂಕಟೇಶ್ ಓಹಿಲೇಶ್ವರ ಚಿತ್ರಕ್ಕೆ ವಿಜಯನಾರಸಿಂಹ ಅವರನ್ನು ಚಿತ್ರಸಾಹಿತಿಯಾಗಿ ಕರೆತಂದರು.  ಆ ಚಿತ್ರಕ್ಕೆ ವಿಜಯನಾರಸಿಂಹರು ಬರೆದ ‘ಈ ದೇಹದಿಂದ ದೂರನಾದೆ ಏಕೆ ಆತ್ಮನೇ’ ಎಂಬುದು ಇಂದಿಗೂ ಪ್ರಸಿದ್ಧಿ.  ಬಸ್ ಸ್ಟಾಂಡಿನಲ್ಲಿ  ಬಿಡುಗಾಸನ್ನರಸುವ ಭಿಕ್ಷುಕರಿಂದ,  ಆಧ್ಯಾತ್ಮಿಕ ಲೋಕದಲ್ಲಿ ಆತ್ಮವನ್ನರಸುವ ಭಕ್ತವರೇಣ್ಯರವರೆಗೆ ಈ ಹಾಡು ಮಾಡಿರುವ ಮೋಡಿ ಅನನ್ಯವಾದುದು.
ಮುಂದೆ ವಿಜಯನಾರಸಿಂಹ ಬರೆದ ಹಾಡುಗಳು ಒಂದಕ್ಕಿಂತ ಒಂದು ಮಹತ್ವಪೂರ್ಣವಾದುದು. ‘ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ’,  'ನೋಡು ಬಾ ನೋಡು ಬಾ ನಮ್ಮೂರ', ‘ಪಂಚಮವೇದ ಪ್ರೇಮದ ನಾದ’, ‘ಬಾರೆ ಬಾರೆ ಚಂದದ ಚೆಲುವಿನ ತಾರೆ’, ‘ಆಸೆಯ ಭಾವ ಒಲವಿನ ಜೀವ’,  ‘ವಸಂತ ಬರೆದನು ಒಲವಿನ ಓಲೆ’, ‘ವಿರಹಾ ನೂರು ನೂರು ತರಹ’, ‘ಆಡೋಣಾ ನೀನು ನಾನು’, ‘ನೀತಿವಂತ ಬಾಳಲೇ ಬೇಕು’, ‘ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ’, ‘ಭಾರತ ಭೂಶಿರ ಮಂದಿರ ಸುಂದರಿ’, ‘ಆ ದೇವರೆ ನುಡಿದ ಮೊದಲ ನುಡಿ’, ‘ಯಾವ ತಾಯಿಯು ಹಡೆದ ಮಗಳಾದರೇನು’, ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ’, ‘ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ’, ‘ಸಂದೇಶ ಮೇಘ ಸಂದೇಶ’, ‘ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದಳು ಸೀತೆ’, ‘ನಿಲ್ಲು ನಿಲ್ಲೇ ಪತಂಗ’, ‘ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ’, ‘ಕಾಪಾಡು ಶ್ರೀ ಸತ್ಯನಾರಾಯಣ’, ‘ಟೂ ಟೂ ಟೂ ಬೇಡಪ್ಪ ಓಡಿ ಬಂದು ನನ್ನ ಸಂಗ ಕಟ್ಟಪ್ಪ’, ‘ಸಂಗಮ ಅನುರಾಗ ತಂದ ಸಂಗಮ’, ‘ಸೇವಂತಿಗೆ ಚಂಡಿನಂತ ಮುದ್ದು ಕೋಳಿ’, ‘ನಗುವಿನ ಅಳುವಿನ ಸಂಕೋಲೆ’, ‘ಬಂದಿದೆ ಬದುಕಿನ ಬಂಗಾರದಾ ದಿನ’, ‘ಹನಿ ಹನಿಗೂಡಿದ್ರೆ ಹಳ್ಳ’ , ‘ಏನೇ ಸುಬ್ಬಿ ತುಂಬ ಕೊಬ್ಬಿ’, ‘ಹಿಂದೂಸ್ಥಾನವು ಎಂದೂ ಮರೆಯದ’, ‘ನೀನೇ ಸಾಕಿದಾ ಗಿಣಿ’, ‘ಕೇಳು ಮಗುವೆ ಕಥೆಯಾ ಆಸೆ ತಂದ ವ್ಯಥೆಯಾ’, 'ಸಕಲ ಕಾರ್ಯ ಕಾರಣಗೆ ಸಾಷ್ಟಾಂಗ ವಂದನೆ' ಮುಂತಾದ ಸಹಸ್ರಾರು ಹಾಡುಗಳನ್ನು ವಿಜಯನಾರಸಿಂಹ ಬರೆದರು.   ನನಗೆ ವೈಯಕ್ತಿಕವಾದ ಇಂಥಹ ಪ್ರಿಯವಾದ ಹಾಡುಗಳೇ ಇನ್ನೂ ನೂರಾರು ಸಿಗುತ್ತವೆ.  
ಭಕ್ತಿಗೀತೆಗಳಲ್ಲಿ ಇವತ್ತಿಗೂ ನಂಬರ್ ಒನ್ ಎನಿಸಿಕೊಂಡಿರುವ 'ಗಜಮುಖನೆ ಗಣಪತಿಯೆ ನಿನಗೆ ವಂದನೆ’ಯನ್ನು ಬರೆದವರು ಇದೇ ವಿಜಯನಾರಸಿಂಹ.  ಬಹುಶಃ ಇಂದೂ ಹೆಚ್ಚಿನ ರೀತಿಯಲ್ಲಿ ಪ್ರಚಲಿತವಿರುವ ‘ಭಾದ್ರಪದ ಶುಕ್ಲದ ಚೌತಿ’ಯಷ್ಟು ಖರ್ಚಾದ ಭಕ್ತಿಗೀತೆಯ ಕ್ಯಾಸೆಟ್ ಸಿಡಿ ಮತ್ತೊಂದು ಕನ್ನಡನಾಡಿನಲ್ಲಿ ಇರಲಾರದು.  ಗಣೇಶನ ಹಬ್ಬ ನಮ್ಮ ಊರುಗಳಲ್ಲಿ ಈ ಹಾಡುಗಳಿಲ್ಲದೆ ನಡೆಯುವುದೇ ಇಲ್ಲ ಎಂದರೂ ಸರಿಯೇ.  ಶರಣು ಶರಣಯ್ಯ ಶರಣು ಬೆನಕ ಈ ಕ್ಯಾಸೆಟ್ಟಿನ ಮತ್ತೊಂದು ಪ್ರಖ್ಯಾತ ಗೀತೆ.  ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ಎಂಬುದು ಅವರ ಮತ್ತೊಂದು ಪ್ರಖ್ಯಾತ ಗೀತೆ. 
ಹೀಗೆ ಸುಮಾರು ನಾಲ್ಕು ಸಹಸ್ರ ಗೀತೆಗಳನ್ನು ಬರೆದ ವಿಜಯನಾರಸಿಂಹರು ಸಾಹಿತ್ಯ ರಚಿಸಿದ ಕೊನೆಯ ಚಿತ್ರಗಳಲ್ಲಿ ‘ಒಡಹುಟ್ಟಿದವರು’, 'ಅಣ್ಣಾವ್ರ ಮಕ್ಕಳು', 'ಶಿವಲೀಲೆ', 'ಪೂರ್ವಾಪರ' ಮುಂತಾದವು ಸೇರಿವೆ.  ಇಷ್ಟೆಲ್ಲಾ ಸಾಧಿಸಿದರೂ ಇಂಥಹ ಮಹತ್ವದ ಕಲಾವಿದರು ಜೀವನದಲ್ಲಿ ಬಡತನದ ರೇಖೆಯಿಂದ ಮೇಲೇರಾಗಲಿಲ್ಲ ಎಂಬುದು ಬದುಕಿನ ದೊಡ್ಡ ವಿಪರ್ಯಾಸ. ವಿಜಯನಾರಸಿಂಹ ಅವರು ಕಾದಂಬರಿಕಾರರೂ ಹೌದು.  ಅವರ ಪ್ರಸಿದ್ಧ ಕಾದಂಬರಿಗಳಾದ ಬದುಕಿನ ಭೈರಾಗಿ, ಶ್ರೀಮಾನ್ ಚಕ್ರಾಯಣ ಮತ್ತು  ಪುಟ್ಟಣ್ಣ ಕಣಗಾಲ್ ಬದುಕಿನ ಚರಿತ್ರೆ ಪ್ರಖ್ಯಾತಗೊಂಡಿವೆ. ಮಹಾನ್ ಚಿತ್ರಸಾಹಿತಿ ವಿಜಯನಾರಸಿಂಹ
 2001ರ ಅಕ್ಟೋಬರ್ 31ರಂದು ಈ ಲೋಕವನ್ನಗಲಿದರು. 


--ಕನ್ನಡ ಸಂಪದ Kannada Sampada

Apr 05, 2021 at 9:48 am

ನಾಟಕದ ವಿಮರ್ಶೆ- ' ಕರಿ ಅಂಗಿ ಓವರ್ ಕೋಟು '
' #ಸಮಾಜಮುಖಿ' ಯ ಹೊಸವರ್ಷದ ಸಂಚಿಕೆಯಲ್ಲಿ ಪ್ರಕಟವಾಗಿದೆ. ದಯವಿಟ್ಟು ಓದು, ಪ್ರತಿಕ್ರಯಿಸಿ.#ಬಿಳಿ_ಅಂಗಿ_ಓವರ್_ಕೋಟು
ಅಭಿನಯ: ಸಮಾಜಮುಖಿ ರಂಗಬಳಗ.

' ಕರಿ ಅಂಗಿ ಓವರ್ ಕೋಟು '
ಪೆಂಟಯ್ಯನ ಅಂಗಿ ಕನ್ನಡದ ಪ್ರಮುಖ ಕವನಗಳಲ್ಲೊಂದಾದರೆ, ಓವರ್ ಕೋಟ್, ರಷ್ಯಾದ ವಾಸ್ತವವಾದೀ ಸಾಹಿತ್ಯಕ್ಕೆ ಬಾಗಿಲು ತೆರೆದ ಕಥೆ ಎನ್ನಲಾಗುತ್ತದೆ. ಎರಡೂ ಅಗದೀ ಮಹತ್ವದ ಕೃತಿಗಳು. ಇಪ್ಪತ್ತೊಂದನೆಯ ಶತಮಾನದಲ್ಲಿ ಕೆ.ವಿ ತಿರುಮಲೇಶರು ಬರೆದ ಕೆಂಪಯ್ಯನ ಅಂಗಿಗೂ ಹತ್ತೊಂಭತ್ತನೆಯ ಶತಮಾನದ ಮಧ್ಯಭಾಗದಲ್ಲಿ ನಿಕೊಲಾಯ್ ಗೊಗೊಲ್ ಬರೆದ  'ಓವರ್ ಕೋಟ್' ಗೂ ಸಾಕಷ್ಟು ಸಾಮ್ಯಗಳಿವೆ. ಈ ಸಾಮ್ಯತೆಗಳ ಗ್ರಹಿಕೆಯಲ್ಲೇ ಪ್ರಸ್ತುತ ರಂಗಪ್ರಯೋಗವನ್ನು ಕಟ್ಟಲಾಗಿದೆ.
ಇದ್ದಿಲು ಮೂಟೆ ಹೊರುತ್ತ ಮೈ, ಬಟ್ಟೆಗಳನ್ನೆಲ್ಲಾ ಕರಿ ಮಾಡಿಕೊಂಡ ಕೆಂಪಯ್ಯನಿಗೆ ಅವನದೇ ಆದ ಕನಸುಗಳಿವೆ. ಈ ಕೊಳೆಯ ನರಕದಿಂದ ಹೊರಬರಬೇಕು, ತಾನೂ ಎಲ್ಲರಂತಾಗಬೇಕೆಂಬ ಕನಸು. ಇಂಥ ಕನಸಿನ ನನಸಿಗೆ  ದಾರಿಯಾಗೋದು, ಆಗಷ್ಟೇ ರಿಲೀಸ್ ಆಗಿ ಊರಿಗೆ ಬಂದಿರುವ 'ಅಡವಿ ರಾಮುಡು' ಎನ್ನೋ ಹೊಚ್ಚ ಹೊಸ ಸಿನಿಮಾ. ತಾನು ಧರಿಸಿಕೊಂಡ ಬಟ್ಟೆಗಳನ್ನು ನೋಡಿದ್ರೆ ಟಾಕೀಸಿನ ಒಳಗೆ ಬಿಡೋದಿಲ್ಲ ಎಂತ ಗೊತ್ತಾದಾಗ ಪೆಂಟಯ್ಯ ಬಿಳೀ ಅಂಗಿ ಕೊಂಡುಕೊಳ್ಳೋಕೆ ಮನಸ್ಸು ಮಾಡ್ತಾನೆ. ಕೊಂಡುಕೊಳ್ತಾನೆ ಕೂಡ. ಇನ್ನೇನು ಆತನ ಕನಸು ನನಸಾಗೋದಕ್ಕೆ ಒಂದೇ ಮೆಟ್ಟಿಲು ಬಾಕಿ ಎಂದಿರೋವಾಗ ವಕ್ಕರಿಸಿಬಿಟ್ತಾನೆ ಕ್ರೂರಿ ಪೋಲೀಸ್ ಪಾಟೀಲ. ಒತ್ತಾಯಪೂರ್ವಕವಾಗಿ ಪೆಂಟಯ್ಯನ ಮೇಲೆ ಇದ್ದಿಲ ಮೂಟೆ ಹೊರಿಸಲಾಗ್ತದೆ. ಹೊಸ ಬಿಳೀ ಅಂಗಿಯೂ ಕರಿಯಾಗುವದರೊಂದಿಗೆ ಪೆಂಟಯ್ಯನ ಕನಸೂ ಕಪ್ಪಾಗಿಬಿಡ್ತದೆ. ಅಂದಿನಿಂದ -ಅಂದಿನಿಂದ ಯಾತಕ್ಕೆ, ಆ ಕ್ಷಣ ದಿಂದ ಪೆಂಟಯ್ಯನ ಬಿಳಿ ಅಂಗಿ ಎಂದೂ ಬಿಳಿಯಂಗಿಯಾಗಿರಲಿಲ್ಲ
-ಕೆ.ವಿ.ತಿರುಮಲೇಶ್

ಇನ್ನು ಸೇಂಟ್ ಪೀಟರ್ಸ್ಬರ್ಗ್ ನ 'ಅಕಾಕಿ' ಯದೂ ಇಂಥದೇ ಕಥೆ. ಆತ ತೊಟ್ಟುಕೊಂಡ ಪುರಾತನ ಕಾಲದ ಓವರ್ ಕೋಟ್ ಗೆ ಹಲವಾರು ತೇಪೆಗಳು. ಚಳಿ ಪ್ರಾರಂಭವಾಗಿದೆ. ಹೇಗಾದರೂ ಮಾಡಿ ಹೊಸ ಕೋಟೊಂದನ್ನ ಕೊಂಡ್ಕೊಂಡು ಚಳಿಯಿಂದ ರಕ್ಷಿಸಕೊಳ್ಬೇಕು. ತನ್ನ ಬಜೆಟ್ ಗಾಗುವ ಟೇಲರ್ ನನ್ನು ಹುಡುಕ್ತಾನೆ ಆತ. ಅವ್ನೂ ಸಿಕ್ತಾನೆ. ಕಾಸು ಕಾಸು ಕೂಡಿಸ್ತಾನೆ. ಓವರ್ ಕೋಟನ್ನೂ ಕೊಂಡ್ಕೊಳ್ತಾನೆ. ಮೊದಲ ದಿನದ ಸಂಜೆ ಓವರ್ ಕೋಟ್ ತೊಟ್ಕೊಂಡು ಹೋಗ್ತಿದ್ದ ಅಕಾಕಿಯನ್ನ ಅಡ್ಡಗಟ್ಟಿದ,  ಪ್ರಭುತ್ವವೇ ಹುಟ್ಟುಹಾಕಿದ  ಕಳ್ಳರು ಕೋಟನ್ನು ದೋಚಿಬಿಡ್ತಾರೆ. ಕೋಟನ್ನು ಕಳಕೊಂಡ ಅಕಾಕಿ ಚಳಿಯಿಂದ ಸತ್ತುಹೋಗ್ತಾನೆ. 'ಅಕಾಕಿಯ ಭೂತ ಊರಲ್ಲೆಲ್ಲ ತಿರುಗಾಡ್ತಾ ಇದೆ' ಅಂತ ಸುದ್ದಿ ಹಬ್ತದೆ. ಒಂದು ರಾತ್ರಿ ಅದೇ ಕೋಟು ತೊಟ್ಕೊಂಡು ಗೆಳತಿಯ ಮನೆಗೆ ಹೊರಟ ಪೊಲೀಸ್ ಅಧಿಕಾರಿಯ ಕತ್ತಿನ ಪಟ್ಟಿ ಹಿಡಿದು  'ಭೂತ' ಓವರ್ ಕೋಟನ್ನು ಕಸಿದುಕೊಳ್ತದೆ. ಮತ್ತೆಂದೂ ಊರಲ್ಲ ಭೂತ ಕಾಣೋದಿಲ್ಲ.
ಅಲ್ಲೂ ಒಂದು ' ಕನಸಿನ ಕೊಲೆಯಾಗುತ್ತದೆ'
ಹೀಗೆ ಆಂಗಿಯನ್ನೂ, ಕೋಟನ್ನೂ ರೂಪಕವಾಗಿಸಿಕೊಂಡ, ಜನಸಾಮಾನ್ಯರನ್ನ ತಲೆಯೆತ್ತದಂತೆ ಮೆಟ್ಟಿ ಹೊಸಕಿ ಹಾಕುವ ಪ್ರಭುತ್ವದ ಅಮಾನವೀಯ ಮುಖಗಳನ್ನ ಬೇರೆ ಬೇರೆ ನೆಲೆಯಲ್ಲಿ ಅನಾವರಣಗೊಳಿಸುವ ಕೃತಿಗಳನ್ನ ಎತ್ತಿಕೊಂಡು ರೂಪಿತವಾದ ರಂಗ ಪ್ರಯೋಗ ' ಬಿಳಿ ಅಂಗಿ ಓವರ್ ಕೋಟು' 
' ಕನಸೇ ಕನಸೇ ಕಮರಿಹೋಗದಿರು ಕನಸೇ.....' ಎಂದು ಕನಸಿನ ಹಾಡಿಂದ ಶುರುವಾಗುವ ನಾಟಕವಾದರೂ ನಿರೂಪಣೆಗೆ ಆಯ್ದುಕೊಂಡಿದ್ದು ವಾಸ್ತವವಾದಿ ಶೈಲಿಯೇ. ಪೇಟೆಯ ಬೀದಿಯಲ್ಲಿರುವ ಇದ್ದಿಲು ಅಂಗಡಿ, ಭಟ್ಟರ ಚಹಾದ ಹೊಟೆಲ್, ರೆಡಿಮೇಡ್ ಬಟ್ಟೆಯ ಅಂಗಡಿಗಳ ಅಂಗಳದಲ್ಲೇ ಪೆಂಟಯ್ಯನ ಕಥೆಯ ಆಟ ಕಟ್ಟುತ್ತಾರೆ ನಿರ್ದೇಶಕರು. ಪೆಂಟಯ್ಯನ ಜೊತೆಗೆ ಇದ್ದಿಲು ಅಂಗಡಿ ಓನರ್, ಒಬ್ಬಿಬ್ಬರು ಪಡ್ಡೆ ಹುಡುಗರು, ಬಟ್ಟೆ ಅಂಗಡಿಯ ಹೆಂಗಸು,ಪೋಲೀಸ ಪಾಟೀಲ್.  ಜೊತೆಗೆ ಬೀದಿ  ನಾಯಿಯೂ ಇದೆ. ಗಮನಿಸಿ. ಅದು 'ಬಿಳಿಯ' ನಾಯಿ. ನಾಟಕದ ಘಟನೆಗಳಿಗೆಲ್ಲ ಸಾಕ್ಷಿಯಾಗುವ ಪೆಂಟಯ್ಯನ ಈ ನಾಯಿ ಒಂದು ರೀತಿಯಲ್ಲಿ ಪೆಂಟಯ್ಯನ ಮನೋಭಾವದ ಬಿಂಬ ಕೂಡ. ನಾಟಕದುದ್ದಕ್ಕೂ ಪೋಲೀಸ ಪಾಟೀಲನನ್ನು ಎದುರಿಸಿ ನಿಲ್ಲುವ ಪೆಂಟಯ್ಯನ ದೊಟ್ಟ ಸಪೋರ್ಟ್ ಇದು. ಯಾರ ಕಂಡರೂ ಕೂಗದ ನಾಯಿ ಪೋಲಿಸಪ್ಪನಿಗೆ ಮಾತ್ರ ಬೊಗಳಿ ಹೆದರಿಸ್ತದೆ. 
ಪೆಂಟಯ್ಯನ ಕಥೆ ನಡೆಯುತ್ತಿರುವಾಗಲೇ ' ಓದಾನೊಂದು ಕಾಲದಲ್ಲಿ.....ಏನಾಯ್ತಪ್ಪಾಂದ್ರೆ' ಎನ್ನುವ ಹಾಡಿನೊಂದಿಗೆ ಮಧ್ಯೆ ಸೇರಿಕೊಳ್ಳುವ ಅಕಾಕಿ ಯ ಕಥೆ ಸಮಾನಾಂತರವಾಗಿ ನಡೆಯುತ್ತ ಹೋಗುತ್ತದೆ. ಹೊರನಾಡಿನ ಈ ಕಥೆಗೆ ಸೂಚ್ಯವಾದ ರಂಗ ಸಜ್ಜಿಕೆಯನ್ನ ರಂಗದ ಹೊರಗಿನಿಂದಲೇ ಜಾರಿಸುವ ಜಾಣತನ ತೋರುತ್ತಾರೆ ನಿರ್ದೇಶಕರು. ಹಳ್ಳಿಯ ಸೆಟ್ ನ ಮುಂಭಾಗದಲ್ಲಿ ಲಭ್ಯವಿದ್ದ ಜಾಗದಲ್ಲೇ ಹಿಮ ಮುತ್ತಿದ ಬೆಟ್ಟ, ನೆಲವನ್ನೆಲ್ಲ ಹೊತ್ತು ತರುವ ಕಲಾವಿದರು ಸೇಂಟ್ ಪೀಟರ್ಸ್ಬರ್ಗ್ ನ ವಾತಾವರಣವನ್ನು ಸುಲಭವಾಗಿ ಸೃಷ್ಟಿಮಾಡಿಬಿಡುತ್ತಾರೆ. ಕವನವನ್ನು ಕಥೆಯಾಗಿಸುತ್ತ, ಕಥೆಯನ್ನು ಕಾವ್ಯವಾಗಿಸುತ್ತ ಸಾಗುವ ಈ ರಂಗಪ್ರಯೋಗ ಗಾಢ ವಿಷಾದದ ತಂತಿಯೊಂದನ್ನು  ನೋಡುಗರೆದೆಯಲ್ಲಿ ಮೀಟುವ ಯತ್ನ ಮಾಡುತ್ತದೆ. ಪ್ರಯೋಗಕ್ಕೆ ಆರಿಸಿಕೊಂಡಿರುವ ಕಥೆ, ಕಾವ್ಯಗಳು ಮೂಲದಲ್ಲೇ ಅಂಥ ಭಾವವನ್ನು ಹೊತ್ತಿರುವದು ಕೂಡ ಇದಕ್ಕೆ ಕಾರಣ. 
ಇಡಿಯ ರಂಗ ಪ್ರಯೋಗ ಮೂಲಕ್ಕೆ ನಿಷ್ಠವಾಗಿದೆ. ಸರಳವಾದ ಮಾತುಗಳು, ಹಾಡುಗಳು ಆಶಯವನ್ನ ಸುಲಭವಾಗಿ ದಾಟಿಸುತ್ತವೆ. ಎಲ್ಲ ನಟರೂ ಸಾಕಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ. ಪ್ರಯೋಗದಲ್ಲಿ ಅಚ್ಚುಕಟ್ಟುತನವಿದೆ. ವಸ್ತ್ರ ವಿನ್ಯಾಸ ಸರಳವಾಗಿ, ಅಥೆಂಟಿಕ್ ಆಗಿದೆ. ರೆಕಾರ್ಡೆಡ್ ಸಂಗೀತ ಹಾಡುಗಳಿಗೆ ಸೀಮಿತವಾಗಿದೆ. ಸಂಯೋಜನೆಯೂ ಚೆನ್ನಾಗಿದೆ.
ಇಷ್ಟೆಲ್ಲ ಆದ ಮೇಲೂ, ಇನ್ನೊಂದಿಷ್ಟು ಸಂಗೀತದ ಸಪೋರ್ಟ್ ನೊಂದಿಗೆ ಪ್ರಯೋಗದ ಅನುಭವವನ್ನು ಇನ್ನಷ್ಟು ಗಾಢವಾಗಿಸಬಹುದಿತ್ತೇನೋ,  ಇನ್ನೊಂದು ಸ್ವಲ್ಪ ಸ್ವಾತಂತ್ರ್ಯ ತೆಗೆದುಕೊಂಡು ಅಂತ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬಹುದಿತ್ತೇನೋ ಎನಿಸುತ್ತದೆ.
ಏನೇ ಇರಲಿ, ಇಂಥದೊಂದು ಹೊಸ ಪ್ರಯತ್ನಕ್ಕೆ ಅಭಿನಂದನೆಗಳು ಸಲ್ಲುತ್ತವೆ.

- ಕಿರಣ ಭಟ್, ಹೊನ್ನಾವರ

Apr 05, 2021 at 9:48 am

" ನಾಟಕವೆಂದರೆ ಹೀಗಿರಬೇಕು..."


  · 
#ಹಕ್ಕಿಕಥೆ
********
#ಕೊಡಚಾದ್ರಿ ಯನ್ನು ಹತ್ತಿಳಿಯಲು #ರೋಪ್_ವೇ ನಿರ್ಮಿಸುವ ಮಾತುಗಳು ಬಂದಾಗ ಸಿಡಿದೆದ್ದವರನ್ನು ಅಭಿವೃದ್ಧಿಯ ವಿರೋಧಿಗಳೆಂದು ವ್ಯಾಖ್ಯಾನಿಸಿದವರ ನಡುವೆ ಹೋರಾಟವನ್ನು ಜೀವಂತವಾಗಿರಿಸಿದ "ಪರಿಸರ ಪ್ರಿಯ"ರಿಗಿದ್ದ ಸ್ವಾರ್ಥವಾದರೂ ಏನು ಎಂದು ಅಚ್ಚರಿಗೊಳ್ಳುತಿದ್ದೆ! ಶಿವಮೊಗ್ಗ ರಂಗಾಯಣದ ಮೂಲಕ ನಿರ್ಮಾಣಗೊಂಡ ನಾಟಕ #ಹಕ್ಕಿ_ಕಥೆ ಯನ್ನು ತೆಕ್ಕಟ್ಟೆ ಪ್ರಯೋಗದಲ್ಲಿ ನೋಡಿದ ಬಳಿಕ ಸಹ್ಯಾದ್ರಿ ಬೆಟ್ಟ ಸಾಲುಗಳು ಎದುರಿಸಿದ ಕಂಟಕವನ್ನೇ ಕೊಡಚಾದ್ರಿಯೂ ಎದುರಿಸಬೇಕಾದ ಅನಿವಾರ್ಯ ಸನ್ನಿವೇಶವನ್ನು ರೂಪುಗೊಳಿಸುವಲ್ಲಿ ನಮ್ಮ "ಅಭಿವೃದ್ಧಿಯ ಹರಿಕಾರ'ರು ಶತ ಪ್ರಯತ್ನದಲ್ಲಿರಬಹುದೆಂದು ಸರಳವಾಗಿ ಅರ್ಥ ಮಾಡಿಕೊಂಡೆ.
****
ನಾಟಕವೊಂದು ಏನೆಲ್ಲವನ್ನು ಹೇಳಬಹುದು ಮತ್ತು ಹೇಗೆಲ್ಲಾ ಹೇಳಬಹುದು ಎಂದು ಯಾರಾದರೂ ಕೇಳಿದರೆ ನಾನು #ಹಕ್ಕಿಕಥೆ ಯತ್ತೃ ಬೆರಳು ತೋರಿಸುವೆ!
ಪ್ರಕೃತಿಯ ಭಾಗವೇ ಆಗಿರುವ ಮನುಷ್ಯರು ಸ್ವತಃ ಅದರ ನಾಶಕ್ಕಾಗಿ ತೊಡಗಿಸಿಕೊಂಡಿರುವುದನ್ನು ನಿರೂಪಿಸಿರುವ  ಈ ಕಥಾನಕವನ್ನು ಬೆರಗುಗಣ್ಣಿನಿಂದಲೇ ನೋಡಿದೆ! ನಿರ್ದೇಶಕರ ಚಾಕಚಕ್ಯತೆಯ ಲಾಲಿತ್ಯವನ್ನು ಮತ್ತಷ್ಟು ಸ್ಫುಟಗೊಳಿಸುವ ಬೊಂಬೆಗಳ ಲೀಲಾಜಾಲದ ಚಲನೆ ಜೊತೆಗೆ ಪಾತ್ರಧಾರಿಗಳ ಮಿಂಚಿನಂತಹ ನಿರ್ವಹಣೆ ಇಡೀ ನಾಟಕವನ್ನು ಆಪ್ತವಾಗಿ ಎದೆಗಿಳಿಸುವ ಪರಿಯಂತೂ ರೋಮಾಂಚಕ.
 ಬೊಂಬೆಗಳನ್ನು ಇಷ್ಟೊಂದು ನಾಜೂಕಾಗಿ ಮತ್ತು ಅರ್ಥಪೂರ್ಣವಾಗಿ ಬಳಸಿರುವುದನ್ನು ಮೊದಲ ಬಾರಿಗೆ ನೋಡಿದೆ. ಪೂರಕವಾಗಿ ಭಾವನಾತ್ಮಕವಾದ ಸಂಗೀತ-ಗೀತಧಾರೆಗೆ ಶರಣಾದೆ.ಚಂಡೆಯನ್ನು ಈ ರೀತಿ ಪ್ರತೀ ಸನ್ನಿವೇಶದ ತೀವ್ರತೆಯನ್ನು ಪ್ರತಿಧ್ವನಿಸುವಂತೆ ಬಳಸಿದ ಶೈಲಿಯಂತೂ ಮೈ ನವಿರೇಳಿಸಿತು.
ಇದು ಕೇವಲ ಹಕ್ಕಿಗಳ ಕಥೆಯೆನಿಸಲಿಲ್ಲ ನನಗೆ! ತನ್ನ ಸ್ವಾರ್ಥಕ್ಕಾಗಿ ಇಡೀ ಭೂಮಿಯನ್ನು ದುರ್ಬಳಕೆ ಮಾಡಿಕೊಂಡ ಬಳಿಕ ಎಲ್ಲವೂ ವಿಷಮಯವಾಗಿ, ನಿಲ್ಲಲು ನೆಲೆಯಿಲ್ಲದ ದಿನಗಳಿಗೆ ಒಡ್ಡಿಕೊಂಡಿರುವ ಮನುಷ್ಯನ ಕಥೆಯೂ ಇದೇ ಆದೀತು. ನಾಟಕದ ಪ್ರತಿ ದೃಶ್ಯವೂ ನೀಡಿದ ಅನುಭವಗಳು ಹಾರ್ದಿಕವಾಗಿ ಬಹುಕಾಲ ನೆನಪಿನಲ್ಲಿ ಉಳಿಯುವುದಲ್ಲದೆ  ನಮ್ಮ ಪರಿಸರವನ್ನು ಉಳಿಸಿಕೊಳ್ಳಲು ನಮ್ಮ ಜವಾಬ್ದಾರಿಯನ್ನೂ ನೆನಪಿಸುತ್ತದೆ.


--ರಮೇಶ್ ಗುಲ್ವಾಡಿ
ಚಿಂತನ ರಂಗ ಅಧ್ಯಯನ ಕೇಂದ್ರ.

Apr 05, 2021 at 9:48 am

"ನಮ್ಮ ಕಷ್ಟಗಳಿಗಿಂತಲೂ ನಮ್ಮ ಬದುಕು ದೊಡ್ಡದು."
ಖ್ಯಾತ ರಂಗಕರ್ಮಿಗಳಾದ ಕೃಷ್ಣಮೂರ್ತಿ ಕವತ್ತಾರ್ ರವರ ಜೀವನ ಕುರಿತಾದ ಪಾಠ, ಪ್ರತಿಯೊಬ್ಬ ವ್ಯಕ್ತಿಯೂ ಕೇಳಲೇ ಬೇಕಾದ ಮಾತುಗಳು. ಒಮ್ಮೆ ಕೇಳಿ.
"ನಮ್ಮ ಕಷ್ಟಗಳಿಗಿಂತಲೂ ನಮ್ಮ ಬದುಕು ದೊಡ್ಡದು."
ನಿರ್ದೇಶಕರಾದ ಕೃಷ್ಣಮೂರ್ತಿ ಕವತ್ತಾರು ಅವರನ್ನು ಕುರಿತು
           ರಂಗಭೂಮಿ ಮತ್ತು ರಂಗ ಸಂಗೀತಗಳಲ್ಲಿ ಒಲುಮೆ ಮತ್ತು ಬದ್ಧತೆಗಳಿಂದದುಡಿಯುವ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರರು. ಬದುಕಿನ ಗತಿಮತಿಗಳನ್ನು ರಂಗಭೂಮಿಯ ಮೂಲಕವೇ ಕಟ್ಟಿಕೊಳ್ಳಬೇಕೆಂದು ಸತತ ಮೂರು ದಶಕಗಳಿಗಿಂತ ಹೆಚ್ಚು ಕಾಲ ರಂಗಭೂಮಿ ಕ್ಷೇತ್ರದಲ್ಲಿಯೇ ಅಹರ್ನಿಶಿ ಹುಡುಕಾಟ ಮಾಡುತ್ತಿರುವ ಕಲಾ ಮನಸ್ಸು ಇವರದ್ದಾಗಿದೆ. ಬಾಲ್ಯದಿಂದಲೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇವರಿಗೆ ಪ್ರಭಾವ ಉಂಟಾಗಿದ್ದರ ಪರಿಣಾಮವಾಗಿ ದಕ್ಷಿಣ ಕನ್ನಡದ, ಯಕ್ಷಗಾನ, ಭೂತಕೋಲ, ಭಜನೆ, ಸಂಗೀತ, ಮುಂತಾದ ಕಲಾರೂಪಗಳನ್ನು ಹಾಗೂ ಧಾರ್ಮಿಕ ಸಾಂಸ್ಕೃತಿಕ ವೈಭವವನ್ನು ಬೆರಗುಗಣ್ಣಿನಿಂದ ನೋಡುತ್ತಾ, ಕಲಿಯುತ್ತಾ ಕವತ್ತಾರರು ಕಲಾವಿದರಾಗಿ ರೂಪಗೊಂಡವರು, ನಂತರ ನೀನಾಸಂ ರಂಗಶಿಕ್ಷಣ ಕೆಂದ್ರದ ಮೂಲಕ ಪದವಿಯನ್ನು ಪಡೆದು ಇನ್ನೂರಕ್ಕೂ ಹೆಚ್ಚು ಅತ್ಯುತ್ತಮ ಕನ್ನಡ ನಾಟಕಗಳನ್ನು ರಂಗಭೂಮಿಗೆ ಇದುವರೆಗೂ ಕೊಡುಗೆ ನೀಡಿದ್ದಾರೆ.
ಪ್ರೇಕ್ಷಕ ಧರ್ಮ ಮತ್ತು ಸೃಜನಶೀಲತೆ ಎಂಬ ಕಲಾ ಮೀಮಾಂಸೆಯ ಮೂಲಕವೇ ತನ್ನೊಳಗಿನ ಕಲಾವಿದರನ್ನು ಕಂಡುಕೊಂಡು ಆ ಮೂಲಕ ಕನ್ನಡ ರಂಗಭೂಮಿಗೆ ಹೊಸ ಹೊಸ ಕಲಾವಿದರನ್ನು ರೂಪಿಸುತ್ತಾ ಬಂದಿದ್ದಾರೆ. ನಟನಾಗಿ ನಿರ್ದೇಶನಕನಾಗಿ ರಂಗಚಟುವಟಿಕೆಗಳಲ್ಲಿ ಸದಾ ತೊಡಗಿಕೊಳ್ಳುವ ಕವತ್ತಾರರು ಸಂಗೀತವನ್ನು ಅಪರಿಮಿತವಾಗಿ ಪ್ರೀತಿಸುತ್ತಲೇರಂಗ ಸಂಗೀತಕ್ಕೆ ತನ್ನ ನೆಲೆಯಲ್ಲಿಯೇ ಹೊಸದಾರಿಗಳನ್ನು ಕಂಡುಕೊಂಡವರು, ಸೃಷ್ಟಿ ಮತ್ತು ಮರು ಸೃಷ್ಟಿಯ ಸಾಧ್ಯತೆಗಳ ಮೂಲಕ ಸೃಜನಶೀಲತೆಯ ಮಾಂತ್ರಿಕ ಸ್ಪರ್ಶವನ್ನು ಹೊಸ ತಲೆಮಾರಿಗೆ ನಿರ್ದೇಶಕರಾಗಿ ಕವತ್ತಾರರು ನೀಡುತ್ತಾರೆ ಎನ್ನುವುದು ಮಹತ್ವದ ವಿಷಯ.
‘ಆಭಿನಯಿಸಬೇಡಿ, ಅನುಭವಿಸಿ’ ಎಂಬ ತಾತ್ವಿಕನೆಲೆಗಟ್ಟನ್ನು ತಾನು ನಂಬುತ್ತಾ ತನ್ನ ಅಭಿವ್ಯಕ್ತಿಗಳಲ್ಲೂ ಪರಿಚಯಿಸುತ್ತಾ ಮತ್ತು ತನ್ನಲ್ಲಿ ಕಲಿಯುವ ಕಲಾ ವಿದ್ಯಾರ್ಥಿ ಮಿತ ರಿಗೂ ಈ ಸಾಧ್ಯತೆಯ ಮೂಲಕ ಅಭಿನಯ, ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜದ ತನಕ ಸಮಷ್ಟಿಪಜ್ಜೆಯನ್ನು ರಂಗಭೂಮಿಯ ಮೂಲಕ ಉಣಬಡಿಸುವ ಸಮರ್ಥ ನಾಟಕದ ಮೇಷ್ಟ್ರು ಕೃಷ್ಣಮೂರ್ತಿ ಕವತ್ತಾರರು, ಸುಮಾರು ಮೂರು ದಶಕಗಳಿಂದ ರಂಗಭೂಮಿಯನ್ನೇ ನಂಬಿ ಬದುಕುತ್ತಿರುವ ಇವರು ಅತ್ಯಂತ ಕ್ರಿಯಾಶೀಲರು. ನಾಟಕಕ್ಕೆ ಇರುವ ಎಲ್ಲ ಆಯಾಮಗಳಲ್ಲೂ ಹೊಸ ಹೊಸ ಸಾಧ್ಯತೆಗಳನ್ನು ಹುಡುಕುತ್ತಿರುವ ಇವರು ನಿಜಕ್ಕೂ ರಂಗಭೂಮಿಯ ‘ಸಾವಯವ ಪಜೆ ಕೊರೋನಾದಂತಹ ಬಿಕ್ಕಟ್ಟಿನ ಕಾಲದಲ್ಲೂ ಇಡೀ ಜಗತ್ತೇ ಸ್ತಬ್ಧವಾಗಿದ್ದರೂ ಇದಕ್ಕೂ ಹೆಚ್ಚು ವಾಟಗಳನ್ನು ನಿರ್ದೇಶಿಸಿ: ಪ್ರದರ್ಶನ ಮಾಡಿಸಿದ ಕಎತ್ತಿರಲು ಕನ್ನಡ ರಂಗಭೂಮಿ ಮಾತ್ರವ ಭಾರತೀಯ ರಂಗಭೂಮಿಯಲ್ಲೇ ಕಾಯಕ ನಿಷ್ಟ ಹೆಮ್ಮೆಯ ರಂಗವ್ಯಕಿತ್ತ
ಇವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ಒಳಗೊಂಡಂತೆ ಇದುವರೆಗೂ ಹಲವು ಪ್ರಶಸ್ತಿಗಳ ಮಹಾಪೂರವೇ ಹರಿದುಬಂದಿದೆ. ಅಲ್ಲದೇ ಕಿರುತೆರೆ ಮತ್ತು ಹಿರಿತೆರೆಗಳಲ್ಲೂ ಯಶಸ್ವಿ ಕಲಾವಿದರಾಗಿ ಕೃಷ್ಣಮೂರ್ತಿ ಕವತ್ತಾರರು ಕನ್ನಡದ ಮನಸುಗಳ ಜೊತೆ ಇದ್ದಾರೆ.


--ರಂಗವರ್ಣ - Rangavarna
.

Apr 05, 2021 at 9:48 am

ಜೀವಿ ಕಲಾ ಬಳಗ (ರಿ) ವಿದ್ಯಾನಗರ ಹುಬ್ಬಳ್ಳಿ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸಹಯೋಗದಲ್ಲಿ ಹುಬ್ಬಳ್ಳಿಯ ''ಗಾನ ತಾಣ'' ತಂಡದವರಿಂದ "ಗಾನ ತರಂಗ"

ಜೀವಿ ಕಲಾ ಬಳಗ (ರಿ) ವಿದ್ಯಾನಗರ ಹುಬ್ಬಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಇವರ ಸಹಯೋಗದಲ್ಲಿ ಹುಬ್ಬಳ್ಳಿಯ ''ಗಾನ ತಾಣ''  ತಂಡದವರಿಂದ "ಗಾನ ತರಂಗ" ಸಂಗೀತ ಕಾರ್ಯಕ್ರಮ ಗುರುವಾರ ದಿ: ೨೯ - ೧೨-೨೦೨೨ ರಂದು ಸಂಜೆ ೫- ೩೦ ಕ್ಕೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಜರಗುವದು. ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂಡಿತ ಶ್ರೀ ಆನಂದ ದೇಸಾಯಿ ಮತ್ತು ಖ್ಯಾತ ತಬಲಾ ವಾದಕ ಡಾ. ಶ್ರೀಹರಿ ದಿಗ್ಗಾಂವಿ ಅವರನ್ನ ಜೀವಿ ಕಲಾ ಬಳಗದ ವತಿಯಿಂದ ಗೌರವಿಸಿ ಸನ್ಮಾನಿಸಲಾಗುವದು. ಸಭೆಯ ಉದ್ಘಾಟನೆಯನ್ನು ಉಚ್ಛ ನ್ಯಾಯಾಲಯದ ಖ್ಯಾತ ನ್ಯಾಯವಾದಿಗಳಾದ ಡಾ. ಉದಯ ದೇಸಾಯಿಯವರು ನೆರವೇರಿಸಲಿದ್ದಾರೆ. ರಂಗ ಕಲಾವಿದರಾದ ಹಾಗೂ ಸಂಗೀತ ಮತ್ತು ನೃತ್ಯ ಅಕ್ಯಾಡೆಮಿಯ ಮಾಜಿ ಸದಸ್ಯರಾದ ಶ್ರೀ ವೀರಣ್ಣಾ ಪತ್ತಾರ ಅವರು ಅಧ್ಯಕ್ಷತೆಯನ್ನ ವಹಿಸುವರು. ಸರ್ವಶ್ರೀ ಪ್ರಭು ನವಲಗುಂದ ಮಠ, ಸದಾನಂದ ಡಂಗನವರ, ಕುಮಾರ ಬೆಕ್ಕೇರಿ, ಎ ಆಯ್ ಮೇವುಂಡಿ, ಸಂಭಾಜಿ ಕಲಾಲ ಅವರು ಮುಖ್ಯ ಅತಿಥಿಗಳಾಗಿರುವರು. ನಂತರ ಕು ಶ್ರೀಧರ ಭಜಂತ್ರಿಯವರಿಂದ ಶಹನಾಯಿ ವಾದನ, ಕು. ಪ್ರೇಮ ಕೃಷ್ಣ ಮೇಟಿ, ಮಲ್ಲಿಕಾರ್ಜುನ ಚೌಕಿಮಠ, ಸಚಿನ ಪೂಜಾರಿ ಇವರಿಂದ  ಭಕ್ತಿ ಸಂಗೀತ ನಡೆಯುವದು. ನಂತರ ಶ್ರೀಮತಿ ವೀಣಾ ನೇಶ್ವಿ ಕು ಶಿವಸ್ವಾಮಿ ಹಿರೇಮಠ, ಈರಣ್ಣ ಕರೀಕಟ್ಟಿ ಕು. ಗುರುಸ್ವಾಮಿ ಹಿರೇಮಠ ರಂಗಸಂಗೀತ ನಡೆಸಿಕೊಡುವರು. ಆಮೇಲೆ ಕು ಶಿವಸ್ವಾಮಿ ಹಿರೇಮಠ ಗಾಯನ ಪ್ರಸ್ತುತ ಪಡಿಸುವರು ಕೊನೆಗೆ ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂಡಿತ ಆನಂದ ದೇಸಾಯಿ ಅವರಿಂದ ಹಿಂದೂಸ್ತಾನಿ ಗಾಯನ ಜರಗುವದು. ಖ್ಯಾತ ತಬಲಾ ವಾದಕ ಡಾ. ಶ್ರೀಹರಿ ದಿಗ್ಗಾಂವಿ  ವಿಜಯ ಕುಮಾರ ಸುತಾರ, ನಾಗಲಿಂಗಮುರಗಿ, ಶಬ್ಬೀರ ಧಾರವಾಡ ತಬಲಾ ಸಾಥ ನೀಡುವರು. ಕು ಶಿವಸ್ವಾಮಿ ಹಿರೇಮಠ, ಪ್ರೇಮಕೃಷ್ಣ ಮೇಟಿ ಸಂವಾದಿನಿ ನುಡಿಸುವರು. ಕು ಸಚಿನ್ ಪೂಜಾರಿ, ಮಿಥಾಲಿ ಇಜಾರಿ ತಂಬೂರ ಸಾಥ್ ನೀಡುವರು. ಎ೦ದು ಜೀವಿ ಕಲಾಬಳಗದ ಅಧ್ಯಕ್ಷ ಗದಿಗೆಯ್ಯ ಹಿರೇಮಠ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Apr 05, 2021 at 9:48 am

" ದಾವಣಗೆರೆಯಲ್ಲಿ ಸಾವಿತ್ರಿಬಾಯಿ ಫುಲೆ ಏಕವ್ಯಕ್ತಿ ನಾಟಕ ಪ್ರಯೋಗ "
ಜನೆವರಿ ೩, ಪ್ರಥಮ ಮಹಿಳಾ ಶಿಕ್ಷಕಿ  ಮತ್ತು ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನ. ಇದರ ಪ್ರಯುಕ್ತ ದಾವಣಗೆರೆಯಲ್ಲಿ ಸಾವಿತ್ರಿಬಾಯಿ ಫುಲೆ ಏಕವ್ಯಕ್ತಿ ನಾಟಕ ಪ್ರಯೋಗವಿದೆ.
---------------------------------------------------------------
೦೩-೦೧-೨೦೨೩, ಸಂಜೆ ೬ ಗಂ, ಕುವೆಂಪು ಕನ್ನಡ ಭವನ, ದಾವಣಗೆರೆ,  ದಾವಣಗೆರೆ ಪರಿಸರದ ರಂಗಾಸಕ್ತರು  ದಯವಿಟ್ಟು ಬರ್ರಿ...
---------------------------------------------------------------
ಥ್ಯಾಂಕ್ಸ್ ಟು:- ದಾವಣಗೆರೆಯ ಪ್ರಜಾವಾಣಿ,ಅನ್ವೇಷಕರು ಆರ್ಟ್ ಫೌಂಡೇಷನ್,ರಂಗಬಳಗ,ಜಿಲ್ಲಾ ಕಸಾಪ,ಪ್ರತಿಮಾ ಸಭಾ,ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,

--D.S. Chougale

Apr 05, 2021 at 9:48 am

ಧಾರವಾಡದ KCD ಮೈದಾನದಲ್ಲಿ, ನಮ್ಮ ಧಾರವಾಡ ರಂಗಾಯಣದ ಹೆಮ್ಮೆಯ ನಾಟಕ ವೀರರಾಣಿ ಕಿತ್ತೂರ ಚನ್ನಮ್ಮ ಮೆಗಾ ನಾಟಕ
ಇದೆ ಡಿಸೆಂಬರ್ 24 ಮತ್ತು 25 ರಂದು ಧಾರವಾಡದ KCD ಮೈದಾನದಲ್ಲಿ, ನಮ್ಮ ಧಾರವಾಡ ರಂಗಾಯಣದ ಹೆಮ್ಮೆಯ ನಾಟಕ ವೀರರಾಣಿ ಕಿತ್ತೂರ ಚನ್ನಮ್ಮ ಮೆಗಾ ನಾಟಕದ ಮೊದಲೆರಡು ಪ್ರದರ್ಶನ ಗಳಿವೆ. ಬಂದು ನೋಡಿ ಆಶೀರ್ವಾದ ಮಾಡಿರಿ, ಒಂದೊಳ್ಳೆ ಅನುಭವವನ್ನು ಮಿಸ್ ಮಾಡ್ಕೊ ಬೇಡಿ , ನಾಟಕದ ಪ್ರಧಾನ ನಿರ್ದೇಶನ:- ರಮೇಶ್ ಎಸ್ ಪರವಿನಾಯ್ಕರ್ ನಿರ್ದೇಶಕರು ರಂಗಾಯಣ ಧಾರವಾಡ

Apr 05, 2021 at 9:48 am

"ಮಾಲೂರು ವಿಜಿ ನಿರ್ದೇಶನ ಮಾಡಿ ಇದರ ಮೊದಲ ಪ್ರದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಿ "

Bangaluru... ಕುಪ್ಪಂ ದ್ರಾವಿಡ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ತುಮಲ ರಾಮಕೃಷ್ಣ ಅವರ ತೆಲುಗು ಕಥೆಗಳನ್ನು ಪ್ರೊ. ಎಂ. ಎನ್. ವೆಂಕಟೇಶ್ ಕನ್ನಡ ನಾಟಕವನ್ನಾಗಿಸಿದ್ದಾರೆ. ಕ್ಷೌರಿಕ ಸಮಾಜದ ಭವಣೆಗಳನ್ನು ಎಳೆ ಎಳೆಯಾಗಿ ಬಿಡಿಸಿದ್ದಾರೆ. ಈ ನಾಟಕವನ್ನು  ಮಾಲೂರು ವಿಜಿ ನಿರ್ದೇಶನ ಮಾಡಿ ಇದರ ಮೊದಲ ಪ್ರದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಳೆ ಸಂಜೆ ಐದಕ್ಕೆ ನಡೆಯಲಿದೆ, ನಾಡಿನ ವಿವಿಧ ಕ್ಷೇತ್ರದಲ್ಲಿ ಶ್ರಮಿಸಿದ ಗಣ್ಯರಿಗೆ ಕಾಯಕಜೀವಿ ಪುರಸ್ಕಾರವು ನೀಡಲಿದ್ದೇವೆ. ದಯಮಾಡಿ ನೀವು ಬನ್ನಿ ನಿಮ್ಮ ಗೆಳೆಯರನ್ನು ಕುಟುಂಬದವರನ್ನು ಕರೆದುಕೊಂಡು ಬನ್ನಿ.. ನಿಮ್ಮ ಬರುವಿಕೆಗಾಗಿ ರಂಗ ವಿಜಯಾ ಕಾಯುತ್ತಿರುತ್ತದೆ. ದಯಮಾಡಿ ಬನ್ನಿ.....



ದಯಮಾಡಿ ನೀವು ಬನ್ನಿ ನಿಮ್ಮ ಗೆಳೆಯರನ್ನು ಕುಟುಂಬದವರನ್ನು ಕರೆದುಕೊಂಡು ಬನ್ನಿ.. ನಿಮ್ಮ ಬರುವಿಕೆಗಾಗಿ ರಂಗ ವಿಜಯಾ ಕಾಯುತ್ತಿರುತ್ತದೆ. ದಯಮಾಡಿ ಬನ್ನಿ.....

--KK

Apr 05, 2021 at 9:48 am


kkkkkk

kkkkkk

kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img