logo

ಕಲಾ
ಕರ್ನಾಟಕ

www.kalakarnataka.com

ಸುವಿಚಾರ
ಬುದ್ಧನಾದ ; ಬದ್ಧನಾದ..????ಸಿದ್ಧನಾದ ಸಿದ್ಧಾರ್ಥ ತನ್ನ ಸಿದ್ಧಾಂತ ಸಾಧನೆಗೆ , ಸತ್ಯದ ಪಥದತ್ತ ಸಾಗಲು ಶಪಥಗೈದ, ಆಶೆಗಳ ಮೆಟ್ಟಿ ಗಟ್ಟಿ ಮನದಿ ತೆರೆದ ಹೊಸ ಮನ್ವಂತರದ ಕಾರುಣ್ಯದ ಶಾಂತಿ ಬಾಗಿಲು. ಬದುಕಿನ ನಿಜ ಸಾರ ತಿಳಿದೆದ್ದ , ಬುದ್ಧನಾದ, ಬದ್ಧನಾದ.. ...ಶಿ.ಗು.ಕುಸುಗಲ್ಲ
- - ಶಿ.ಗು.ಕುಸುಗಲ್ಲ

ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಸಪ್ಟೆಂಬರ್ 10 ರಿಂದ 16-2024 ರವರೆಗೆ 'ಕಲರಾ೯ಗ್ ' ಏಕವ್ಯಕ್ತಿ ಕಲಾಪ್ರದರ್ಶನ

ಕಲಾಸುದ್ದಿ
Published By: Kala Karanataka
Last Updated Date:  01-Aug-2024
" ಪ್ರಖ್ಯಾತ ಕಲಾವಿದ ಮುರಿಗೆಪ್ಪ ಎ ಚೆಟ್ಟಿ"

ಪ್ರಖ್ಯಾತ ಕಲಾವಿದ ಮುರಿಗೆಪ್ಪ ಎ ಚೆಟ್ಟಿ (ಲಿಂಗೈಕ್ಯ) ಅವರು ಒಬ್ಬ ಅದ್ಭುತ ವಾಸ್ತವ ಶೈಲಿಯ ಕಲಾವಿದ. ಕರ್ನಾಟಕದ ಅನೇಕ ಧೀಮಂತ ವ್ಯಕ್ತಿಗಳು ಮತ್ತು ಲಿಂಗಾಯತ ಮಠ ಮಾನ್ಯಗಳ ಸ್ವಾಮೀಜಿಗಳ, ತಪಸ್ವಿಗಳ ನೂರಾರು ಭಾವಚಿತ್ರ, ಆಳೆತ್ತರದ ವ್ಯಕ್ತಿ ಚಿತ್ರಗಳನ್ನು ರಚಿಸಿರುವರು.

ಧಾರವಾಡ ಮುರುಘಾ ಮಠದ ಶ್ರೀ ಮ. ನಿ. ಪ್ರ. ಮೃತ್ಯುಂಜಯ ಮಹಾ ಸ್ವಾಮಿಗಳು, ಶ್ರೀ ಮಹಾಂತಪ್ಪಗಳು, ಅಥಣಿಯ ಶ್ರೀ ಶಿವಯೋಗಿಗಳು ಸೇರಿದಂತೆ ಅನೇಕ ಮಹಾ ತಪಸ್ವಿಗಳ ಚಿತ್ರಗಳನ್ನು ಅವರು ರಚಿಸಿದ್ದನ್ನು ಅನೇಕ ಮಠಗಳಲ್ಲಿ ಇರುವುದನ್ನು ನಾನು ಸ್ವತಃ ಕಂಡಿರುವೆನು. ನಾನು ನೋಡಿರುವಂತೆ ಮುರಿಗೆಪ್ಪ ಅವರು ದಪ್ಪನಾದ ಮೀಸೆ ಕಾಯ್ದುಕೊಂಡಿದ್ದರು ಮತ್ತು ಮೀಸೆಗೆ ಸದಾ ಬಣ್ಣ ಹಾಕುತ್ತಿದ್ದರು. ಗದುಗಿನ ಅವರ ಕಲಾವಿದಮಿತ್ರ ಟಿ ಪೀ ಅಕ್ಕಿಯವರು ಇಲ್ಲವಾದ ಬಳಿಕ ಮೀಸೆಗೆ ಬಣ್ಣ ಹಾಕುವುದನ್ನು ಬಿಟ್ಟಿದ್ದರು. 1996 ರಲ್ಲಿ ಕಲಬುರ್ಗಿಯ ಶ್ರೀ ಶರಣ ಬಸವೇಶ್ವರ ಲಲಿತ ಕಲಾ ವಿಭಾಗದಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನದಿಂದ ರಾಷ್ಟ್ರೀಯ ಕಲಾ ಶಿಬಿರವನ್ನು ಆಯೋಜನೆ ಮಾಡಿದ್ದಾಗ ಮುರಿಗೆಪ್ಪ ಚೆಟ್ಟಿ ಅವರನ್ನೂ ಆಹ್ವಾನಿಸಲಾಗಿತ್ತು ಆ ಸಂದರ್ಭದಲ್ಲಿ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದರು, ನಾನು ಅವರ ಸೊಂಟಕ್ಕೆ ಆಯಿಲ್ ಮಸಾಜ್ ಮಾಡುತ್ತಾ "ಮೀಸೆಗೆ ಏಕೆ ಬಣ್ಣ ಹಚ್ಚುವುದನ್ನು ಬಿಟ್ಟಿದ್ದೀರಿ" ಎಂದು ಕೇಳಿದೆ; ಅದಕ್ಕೆ ಅವರು "ಬಣ್ಣ ಹಚ್ಚಿಲ್ಲ ಏಕೆ? ಎಂದು ನನ್ನನ್ನು ಕೇಳುವವರು ಈಗ ಯಾರಿದ್ದಾರೆ? ನಾನು ಏಕೆ ಬಣ್ಣ ಹಾಕಬೇಕು? ನನ್ನ ಗೆಳೆಯ ಅಕ್ಕಿ ಯಾವಾಗಲೂ ಮೀಸೆಯ ವರ್ಣನೆಯನ್ನು ಮಾಡುತ್ತಿದ್ದ! ಬಣ್ಣ ಸರಿಯಾಗಿ ಲೇಪನ ಆಗಿಲ್ಲ ಎಂದು ಹೇಳುತ್ತಿದ್ದ! ಈಗ ಅವ ಇಲ್ಲ! ಅಂದಿನಿಂದ ನಾನು ಮೀಸೆಗೆ ಬಣ್ಣ ಹಾಕುವುದನ್ನೇ ಬಿಟ್ಟಿದ್ದೇನೆ" ಎಂದರು, ಆಗ ಗುಂಪಿನಲ್ಲಿ ನಗೆಯ ಅಲೆ. ಆ ಸಂದರ್ಭದಲ್ಲಿ ನನ್ನ ಕಲಾ ಗುರುಗಳಾದ ಅರ್ ಎಂ ಹಡಪದವರು ಮತ್ತು ಜೆ ಎಸ್ ಖಂಡೆರಾವ್ ಅವರಿದ್ದರು; ಜೊತೆಗೆ ದೇಶದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಕಲಾವಿದರು ನೆರೆದಿದ್ದರು. ಅದೊಂದು ಅದ್ಭುತ ಸಂದರ್ಭವಾಗಿತ್ತು.
ಈ ಚಿತ್ರದಲ್ಲಿರುವ ನಾವುಗಳೆಲ್ಲ ಅವರನ್ನು ಭೇಟಿ ಮಾಡಲು ಗದುಗಿನ ಅವರ ಮನೆಗೆ ಹೋಗಿದ್ದೆವು. ಆ ಸಂದರ್ಭದ ನೆನಪಿನ ಚಿತ್ರ ಇದು - ಸಿಕ್ಕಿತು. ಈ ಚಿತ್ರದಲ್ಲಿ ಇರುವವರು: ಕವಿ ಶಾಂತರಸರು ಜೊತೆಗೆ ಕಲಾವಿದರಾದ ಅಶೋಕ್ ಅಕ್ಕಿ, ಎಸ್ ಸಿ ಪಾಟೀಲ್, ಕುಂದಗೋಳ, ಯಾದಪ್ಪ ಪರದೇಶಿ, ಲಕ್ಮೀಪತಿ, ವಿರೂಪಾಕ್ಷ ಹಿರೇಮಠ ಮತ್ತು ನಾನು ಶಿವಾನಂದ ಬಂಟನೂರ. ಇಂತಹ ಕಲಾವಿದರು ಈಗ ಅಪರೂಪ.
Courtesy:--Shivanand Bantanur 
Assist. Prof. Dept. of Music and Fine Arts, Central University of karnataka Kadganchi, Kalaburagi


kkkkkk

kkkkkk

kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img