logo

ಕಲಾ
ಕರ್ನಾಟಕ

www.kalakarnataka.com

ಸುವಿಚಾರ
ಬುದ್ಧನಾದ ; ಬದ್ಧನಾದ..????ಸಿದ್ಧನಾದ ಸಿದ್ಧಾರ್ಥ ತನ್ನ ಸಿದ್ಧಾಂತ ಸಾಧನೆಗೆ , ಸತ್ಯದ ಪಥದತ್ತ ಸಾಗಲು ಶಪಥಗೈದ, ಆಶೆಗಳ ಮೆಟ್ಟಿ ಗಟ್ಟಿ ಮನದಿ ತೆರೆದ ಹೊಸ ಮನ್ವಂತರದ ಕಾರುಣ್ಯದ ಶಾಂತಿ ಬಾಗಿಲು. ಬದುಕಿನ ನಿಜ ಸಾರ ತಿಳಿದೆದ್ದ , ಬುದ್ಧನಾದ, ಬದ್ಧನಾದ.. ...ಶಿ.ಗು.ಕುಸುಗಲ್ಲ
- - ಶಿ.ಗು.ಕುಸುಗಲ್ಲ

ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಸಪ್ಟೆಂಬರ್ 10 ರಿಂದ 16-2024 ರವರೆಗೆ 'ಕಲರಾ೯ಗ್ ' ಏಕವ್ಯಕ್ತಿ ಕಲಾಪ್ರದರ್ಶನ

ಕಲಾಸುದ್ದಿ
Published By: Kala Karanataka
Last Updated Date:  18-Aug-2024
" ಕಲಬುರಗಿಯ ಛಾಯಾಗ್ರಹಣ ಜೀವಿ ಶ್ರೀ ಯುತ ಎನ್. ಎಂ.ಜೋಶಿ ಯವರಿಂದ ಛಾಯಾಚಿತ್ರ ಪ್ರದರ್ಶನ "

ಛಾಯಾಗ್ರಹಣವನ್ನೇ ಬದುಕೆಳೆಯುವ ಪ್ರಧಾನ ಬಂಡಿಯನ್ನಾಗಿಸಿಕೊಂಡು, ಪತ್ರಿಕಾ ವರದಿಗಾರಿಕೆಯನ್ನು ಹವ್ಯಾಸವಾಗಿರಿಸಿಕೊಂಡು ಲವಲವಿಕೆಯಿಂದ ಜೀವನ ಸಾಗಿಸುತ್ತಿರುವ ಕಲಬುರಗಿ ನೆಲದ ಪುತ್ರ ಎನ್. ಎಂ.ಜೋಶಿ ಎಂದೇ ಸ್ಥಳೀಕರಿಂದ ಗುರ್ತಿಸಿಕೊಂಡಿರುವ ನಾರಾಯಣ ಮಧುಕರ ಜೋಶಿಯವರ ಛಾಯಾಚಿತ್ರಗಳ ಪ್ರದರ್ಶನ ಕಲಬುರಗಿಯ ಎಂ.ಎಂ.ಕೆ ಕಾಲೇಜಿನ ಮಾತೋಶ್ರೀ ನೀಲಗಂಗಮ್ಮ ಗುರಪ್ಪಾ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ದಿ -19.8.2024 ರಿಂದ 21.8.2024ರವರೆಗೆ ಆಯೋಜನೆಗೊಳ್ಳಲಿಕ್ಕಿದೆ. ಮೂಲತಃ ಇವರ ಮನೆತನ ಕಲಬುರಗಿ ಜಿಲ್ಲಾ ಆಳಂದ ತಾಲೂಕಿನ ಚಿಂಚನಸೂರ್ ನಲ್ಲಿರುವಂತಹುದು.ಆದರೆ ಇವರು ಜನ್ಮಿಸಿ ಬಾಳುತ್ತಿರುವ ನೆಲ ಕಲಬುರಗಿ ಪಟ್ಟಣ.



ಎನ್. ಎಂ.ಜೋಶಿ ಬಸವರಾಜ ಉಪ್ಪಿನ ಎಂಬ ಕಲಬುರಗಿಯ ಖ್ಯಾತ ಹಾಗೂ ಹಿರಿಯ ಚಿತ್ರಕಾರರ ಸಲಹೆಯ ಮೇರೆಗೆ ಪ್ರೊ.ವಿ.ಜಿ.ಅಂದಾನಿಯವರ ದಿ ಐಡಿಯಲ್ ಫೈನ್ ಆರ್ಟ್ ಇನ್ಸ್ಟಿಟ್ಯೂಟ್ ನಲ್ಲಿ (1994ರಲ್ಲಿ)ಚಿತ್ರ ಕಲಾ ಡಿಪ್ಲೊಮಾ ಅಭ್ಯಸಿಸಿದವರು ನಂತರ ಮನೆಯಲ್ಲಿ ಆರ್ಥಿಕ ತೊಂದರೆಯ ಕಾರಣದಿಂದ ಉದರಂಭರಣಕ್ಕಾಗಿ ಛಾಯಾಗ್ರಹಣ ಕೆಲಸದಲ್ಲಿ ತೊಡಗಿಸಿಕೊಂಡವರು.ಛಾಯಾಗ್ರಹಣ ದಲ್ಲಿ ಅಧಿಕೃತತೆ ಪಡೆದುಕೊಳ್ಳಲು ಕಲಬುರಗಿಯ ಒಂದು ಗ್ರಾಮೀಣ ಉದ್ಯೋಗ ಹಾಗೂ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಒಂದು ವರ್ಷದ ಛಾಯಾಗ್ರಹಣ ತರಬೇತಿ ಪಡೆದುಕೊಂಡವರು. ತಮ್ಮ ಕಷ್ಟ ಏನೇ ಇರಲಿ, ಮಂದಿ ಕಷ್ಟ ಪರಿಹಾರ ಕಾಣೋದು ಮುಖ್ಯ ಎಂಬುದು ಇವರ ಸಿದ್ಧಾಂತ ಎಂದರೂ ಒಪ್ಪತಕ್ಕ ಮಾತೇ.ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾದ(ಈಗಲೂ ಒಳಗಾಗುತ್ತಿರುವ)ಚಿತ್ರ ಕಲಾ ಡಿಪ್ಲೊಮಾ/ಚಿತ್ರ ಕಲಾ ಪದವೀಧರರೆಂಬ ಅತ್ಯಂತ ಅಲ್ಪಸಂಖ್ಯಾತ ವರ್ಗಕ್ಕೆ ನ್ಯಾಯ ಒದಗಿಸಬೇಕೆಂಬ ಮಹದೋದ್ದೇಶದಿಂದ ಹುಟ್ಟಿದ ಚಿತ್ರ ಕಲಾ ಪದವೀಧರರ ಒಕ್ಕೂಟದ ಕಲಬುರಗಿ(ಆಗಿ ಗುಲಬರ್ಗಾ)ಜಿಲ್ಲಾ ಚಿತ್ರ ಕಲಾ ಪದವೀಧರರ ಒಕ್ಕೂಟದ ಕಾರ್ಯ ದರ್ಶಿಯಾಗಿ, ಅಧ್ಯಕ್ಷರಾಗಿ ಹೋರಾಟ ಮಾಡಿ ಸರ್ಕಾರದಿಂದ ಕೇಸ್ ಹಾಕಿಸಿಕೊಂಡು ಅವಸ್ಥೆ ಪಟ್ಟ ಧೀಮಂತರಲ್ಲಿ ಎನ್. ಎಂ.ಜೋಶಿ ಯವರೂ ಒಬ್ಬರು. (ಕೊನೆಗೆ ಇವರ ಹೋರಾಟ ಆಗಿನ ಪ್ರಾಥಮಿಕ & ಪ್ರೌಢ ಶಿಕ್ಷಣ ಮಂತ್ರಿ ಗೋವಿಂದೇಗೌಡರವರ ಗಮನಕ್ಕೆ ಬಂದು ಆಗಿನ ಸರ್ಕಾರ ಒಂದಿಷ್ಟು ಚಿತ್ರ ಕಲಾ ಡಿಪ್ಲೊಮಾಧರರಿಗೆ ಕೆಲಸ ನೀಡಿತು(ಆದರೆ ಜೋಶಿಯವರಿಗೆ ಏನೂ ಪ್ರಯೋಜನ ಆಗಲಿಲ್ಲ ಎನ್ನಿ)). ಇದೀಗ ಛಾಯಾಗ್ರಹಣ ವನ್ನೇ ಪ್ರಧಾನ ವೃತ್ತಿ ಪ್ರವೃತ್ತಿಯಾಗಿ ಮಾಡಿಕೊಂಡಿದ್ದಾರೆ.ನಾರಾಯಣ ಜೋಶಿಯವರ ಆಸಕ್ತಿ ಹೆಚ್ಚು ಕೇಂದ್ರೀಕೃತವಾಗಿರುವುದು ಕಲ್ಯಾಣ ಕರ್ನಾಟಕ ಭಾಗದ ಐತಿಹಾಸಿಕ-ಸಾಂಸ್ಕೃತಿಕ ವಿಶೇಷಗಳನ್ನು ಕ್ಯಾಮರಾ ಕಣ್ಣಲ್ಲಿ ದಾಖಲಿಸುವುದರಲ್ಲಿ.ಹಾಗಾಗಿ ಕಲಬುರಗಿ, ಬೀದರ್, ರಾಯಚೂರು ಈ ಭಾಗಗಳ ಕೆಲವು ಐತಿಹಾಸಿಕ ಸ್ಮಾರಕಗಳು, ಅನನ್ಯ ಸಾಂಸ್ಕೃತಿಕ ಸಂದರ್ಭಗಳನ್ನು ಕ್ಲಿಕ್ಕಿಸಿದ್ದಾರೆ.ಮೋಡಕವಿದ /ಮಂದಬೆಳಕಿನ ಸನ್ನಿವೇಶವನ್ನು ಕೂಡಾ ಸುಸ್ಪಷ್ಟವಾಗಿ,ಆಕರ್ಷಕ ಕೋನದಲ್ಲಿ ಸೆರೆಹಿಡಿಯುವುದು ಇವರ ಚಾಕಚಕ್ಯತೆ.
"ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ವೈಶಿಷ್ಟ್ಯಪೂರ್ಣ ಐತಿಹಾಸಿಕ-ಸಾಂಸ್ಕೃತಿಕ ಸ್ಮಾರಕಗಳು ,ತಾಣಗಳು ಇವೆ.ಅವುಗಳಲ್ಲಿ ಬಹಳಷ್ಟು ಅಳಿವಿನಂಚನಲ್ಲಿವೆ.ಅದಕ್ಕೆ ಸಮಾಜ ಹಾಗೂ ನಮ್ಮನ್ನಾ ಳುವ ಸರ್ಕಾರಗಳ ನಿರ್ಲಕ್ಷ್ಯ ಕಾರಣ.ಹಾಗಾಗಿ ನಮ್ಮ ಮುಂದಿನ ಪೀಳಿಗೆ ಇಂಥವುಗಳೆಲ್ಲಾ ನಮ್ಮ ಭಾಗದಲ್ಲಿ ಇದ್ದವು ಎಂಬುದನ್ನು ಛಾಯಾಚಿತ್ರಗಳಲ್ಲಾದರೂ ಕಂಡು ಬೆರಗುಗೊಳ್ಳುವಂತಾಗಲಿ.. ಎಂಬ ಉದ್ದಿಶ್ಯದಿಂದ ನಾನು ಕಲ್ಯಾಣ ಕರ್ನಾಟಕ ಭಾಗಗಳ ಅಮುಲ್ಯ ಸ್ಮಾರಕಗಳು, ಸಾಂಸ್ಕೃತಿಕ ಕುರುಹುಗಳತ್ತ ಪ್ರಧಾನ ಲಕ್ಷ್ಯ ವಹಿಸಿ ಛಾಯಾಗ್ರಹಣ ನಡೆಸುತ್ತೇನೆ" ಎಂಬುದು ಶ್ರೀ ಯುತ ನಾರಾಯಣ ಜೋಶಿಯವರ ಅಭಿಪ್ರಾಯ. ಇವರಿಗೆ ಪತ್ರಿಕೆ ವರದಿಗಾರಿಕೆಯಂತೆಯೇ ರಂಗ ಚಟುವಟಿಕೆಯಲ್ಲೂ ಸಹ ಆಸಕ್ತಿ ಇದೆ. ಹಿಂದೊಮ್ಮೆ ಸುರೇಶ್ ಬಿ ಎನ್ನುವವರ 'ಅರ್ಥ' ಸಿನೇಮಾದಲ್ಲಿ ಸಣ್ಣ ಪಾತ್ರ ಮಾಡಿದ್ದೂ ಉಂಟು. ಎನ್ ಎಂ.ಜೋಶಿ ಶುದ್ಧ ಹಸ್ತರು, ಮುಗ್ಧ ಮನಸ್ಥಿತಿಯವರೂ ಸಹ.ದುಡ್ಡು ಗಳಿಸುವ ಎಲ್ಲ ವಾಮಮಾರ್ಗಗಳಿಂದಲೂ ಇವರು ದೂರ.ಹಾಗಾಗಿ ಆರ್ಥಿಕ ಅಡಚಣೆ ಇವರಿಗೆ ನಿತ್ಯ ಸಂಗಾತಿ ಎಂದರೂ ಸರಿಯೇ.

ತಮ್ಮೆಲ್ಲ ಹಣಕಾಸು ತೊಂದರೆ ನಡುವೆಯೂ ವಿಶ್ವ ಛಾಯಾಗ್ರಹಣದಿನವಾದ ಆಗಸ್ಟ್19ನೇ ತಾರೀಖಿನಂದು ಛಾಯಾಗ್ರಹಣ ಪ್ರದರ್ಶನ ಆಯೋಜಿಸಿರುವ ಶ್ರೀ ಯುತ ಜೋಶಿಯವರು ಅಭಿನಂದನಾರ್ಹರು.ಸುಮಾರು 62ಛಾಯಾಚಿತ್ರಗಳು ಇಲ್ಲಿ ಪ್ರದರ್ಶನ ಕಾಣಲಿದ್ದು ಕೆಲವು8ಇಂಚು×12ಇಂಚು ,ಮತ್ತೆ ಕೆಲವು 12ಇಂಚು×18ಇಂಚು ಅಳತೆಯವು. ಈ ಪ್ರದರ್ಶನದ ಉದ್ಘಾಟನೆ ಅವರ ಕಲಾಗುರುಗಳೂ,ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತರೂ,ಗುಲ್ಬರ್ಗ ವಿ ವಿಯ ಗೌರವ ಡಾಕ್ಟರೇಟ್ ಭಾಜನರೂ ,ಕಲಬುರಗಿಯ ಹಿರಿಯ ಕಲಾವಿದರುಗಳಲ್ಲಿ ಒಬ್ಬರೂ ಹಾಗೂ ನಾಡಿನ ಪ್ರಸಿದ್ಧ ದೃಶ್ಯ ಕಲಾವಿದರುಗಳಲ್ಲಿ ಒಬ್ಬರೂ ಆದ ಪ್ರೊ.ವಿ.ಜಿ ಅಂದಾನಿಯವರಿಂದ ಆಗಲಿದೆ. ವಿಶ್ವ ಛಾಯಾಗ್ರಹಣ ದಿನವನ್ನು(19.8.2024)ತಮ್ಮ ಛಾಯಾಚಿತ್ರಗಳ ಪ್ರದರ್ಶನ ಆಯೋಜನೆ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಿರುವ ಏವತ್ತೈದರ ಹರೆಯದ (ಜನನ-1970)ಶ್ರೀಯುತ ನಾರಾಯಣ ಮಧುಕರ ಜೋಶಿಯವರಿಗೆ ಹೃತ್ಪೂರ್ವಕ ಶುಭಹಾರೈಕೆದತ್ತಾತ್ರೇಯ ಎನ್. ಭಟ್ಟ(ಛಾಯಾಚಿತ್ರ ಕೃಪೆ-ಎನ್. ಎಂ.ಜೋಶಿ)

--Dattatreya N Bhat.
  


kkkkkk

kkkkkk

kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img