Published By: Kala Karanataka
Last Updated Date: 27-Dec-2022
ಜೀವಿ ಕಲಾ ಬಳಗ (ರಿ) ವಿದ್ಯಾನಗರ ಹುಬ್ಬಳ್ಳಿ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸಹಯೋಗದಲ್ಲಿ ಹುಬ್ಬಳ್ಳಿಯ ''ಗಾನ ತಾಣ'' ತಂಡದವರಿಂದ "ಗಾನ ತರಂಗ"
ಜೀವಿ ಕಲಾ ಬಳಗ (ರಿ) ವಿದ್ಯಾನಗರ ಹುಬ್ಬಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಇವರ ಸಹಯೋಗದಲ್ಲಿ ಹುಬ್ಬಳ್ಳಿಯ ''ಗಾನ ತಾಣ'' ತಂಡದವರಿಂದ "ಗಾನ ತರಂಗ" ಸಂಗೀತ ಕಾರ್ಯಕ್ರಮ ಗುರುವಾರ ದಿ: ೨೯ - ೧೨-೨೦೨೨ ರಂದು ಸಂಜೆ ೫- ೩೦ ಕ್ಕೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಜರಗುವದು. ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂಡಿತ ಶ್ರೀ ಆನಂದ ದೇಸಾಯಿ ಮತ್ತು ಖ್ಯಾತ ತಬಲಾ ವಾದಕ ಡಾ. ಶ್ರೀಹರಿ ದಿಗ್ಗಾಂವಿ ಅವರನ್ನ ಜೀವಿ ಕಲಾ ಬಳಗದ ವತಿಯಿಂದ ಗೌರವಿಸಿ ಸನ್ಮಾನಿಸಲಾಗುವದು. ಸಭೆಯ ಉದ್ಘಾಟನೆಯನ್ನು ಉಚ್ಛ ನ್ಯಾಯಾಲಯದ ಖ್ಯಾತ ನ್ಯಾಯವಾದಿಗಳಾದ ಡಾ. ಉದಯ ದೇಸಾಯಿಯವರು ನೆರವೇರಿಸಲಿದ್ದಾರೆ. ರಂಗ ಕಲಾವಿದರಾದ ಹಾಗೂ ಸಂಗೀತ ಮತ್ತು ನೃತ್ಯ ಅಕ್ಯಾಡೆಮಿಯ ಮಾಜಿ ಸದಸ್ಯರಾದ ಶ್ರೀ ವೀರಣ್ಣಾ ಪತ್ತಾರ ಅವರು ಅಧ್ಯಕ್ಷತೆಯನ್ನ ವಹಿಸುವರು. ಸರ್ವಶ್ರೀ ಪ್ರಭು ನವಲಗುಂದ ಮಠ, ಸದಾನಂದ ಡಂಗನವರ, ಕುಮಾರ ಬೆಕ್ಕೇರಿ, ಎ ಆಯ್ ಮೇವುಂಡಿ, ಸಂಭಾಜಿ ಕಲಾಲ ಅವರು ಮುಖ್ಯ ಅತಿಥಿಗಳಾಗಿರುವರು. ನಂತರ ಕು ಶ್ರೀಧರ ಭಜಂತ್ರಿಯವರಿಂದ ಶಹನಾಯಿ ವಾದನ, ಕು. ಪ್ರೇಮ ಕೃಷ್ಣ ಮೇಟಿ, ಮಲ್ಲಿಕಾರ್ಜುನ ಚೌಕಿಮಠ, ಸಚಿನ ಪೂಜಾರಿ ಇವರಿಂದ ಭಕ್ತಿ ಸಂಗೀತ ನಡೆಯುವದು. ನಂತರ ಶ್ರೀಮತಿ ವೀಣಾ ನೇಶ್ವಿ ಕು ಶಿವಸ್ವಾಮಿ ಹಿರೇಮಠ, ಈರಣ್ಣ ಕರೀಕಟ್ಟಿ ಕು. ಗುರುಸ್ವಾಮಿ ಹಿರೇಮಠ ರಂಗಸಂಗೀತ ನಡೆಸಿಕೊಡುವರು. ಆಮೇಲೆ ಕು ಶಿವಸ್ವಾಮಿ ಹಿರೇಮಠ ಗಾಯನ ಪ್ರಸ್ತುತ ಪಡಿಸುವರು ಕೊನೆಗೆ ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂಡಿತ ಆನಂದ ದೇಸಾಯಿ ಅವರಿಂದ ಹಿಂದೂಸ್ತಾನಿ ಗಾಯನ ಜರಗುವದು. ಖ್ಯಾತ ತಬಲಾ ವಾದಕ ಡಾ. ಶ್ರೀಹರಿ ದಿಗ್ಗಾಂವಿ ವಿಜಯ ಕುಮಾರ ಸುತಾರ, ನಾಗಲಿಂಗಮುರಗಿ, ಶಬ್ಬೀರ ಧಾರವಾಡ ತಬಲಾ ಸಾಥ ನೀಡುವರು. ಕು ಶಿವಸ್ವಾಮಿ ಹಿರೇಮಠ, ಪ್ರೇಮಕೃಷ್ಣ ಮೇಟಿ ಸಂವಾದಿನಿ ನುಡಿಸುವರು. ಕು ಸಚಿನ್ ಪೂಜಾರಿ, ಮಿಥಾಲಿ ಇಜಾರಿ ತಂಬೂರ ಸಾಥ್ ನೀಡುವರು. ಎ೦ದು ಜೀವಿ ಕಲಾಬಳಗದ ಅಧ್ಯಕ್ಷ ಗದಿಗೆಯ್ಯ ಹಿರೇಮಠ ಪ್ರಕಟನೆಯಲ್ಲಿ ತಿಳಿಸಿದ್ದಾರೆ.